KGF ನಂತಹ ಸಿನಿಮಾ ಮೂಲಕ ಇಡೀ ವಿಶ್ವಕ್ಕೆ ಕನ್ನಡ ಸಿನಿಮಾರಂಗದ ಪವರ್ ತೋರಿಸಿರುವ ಪ್ರಶಾಂತ್ ನೀಲ್ ಸದ್ಯಕ್ಕಂತೂ ತೆಲುಗೂ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.. ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾ ಮಾಡ್ತಿದ್ದು ಮುಂದೆ ಅವರು ಜ್ಯೂ NTR ಜೊತೆಗೆ ಸಿನಿಮಾ ಮಾಡೋ ವಿಚಾರ ಎಲ್ರಿಗೂ ಗೊತ್ತೇ ಇದೆ..
ಈ ಸಿನಿಮಾದ ಪೋಸ್ಟರ್ ಇತ್ತೇಚೆಗೆ ರಿಲೀಸ್ ಸಹ ಆಗಿತ್ತು.. ಇದೀಗ ಈ ಸಿನಿಮಾದ ( NTR 31) ಬಗ್ಗೆ ಹೊಸ ಅಪ್ ಡೇಟ್ ಸಿಕ್ಕಿದೆ.. ಅಂದ್ಹಾಗೆ ಈ ಸಿನಿಮಾದಲ್ಲಿ ಬಹುಭಾಷಾ ಸ್ಟಾರ್ ನಟ ಕಮಲ್ ಹಾಸನ್ ಅವರು ಕೂಡ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕಿಚ್ಚು ಹಬ್ಬಿಸಿದೆ..
ಅಂದ್ಹಾಗೆ ಕಮಲ್ ಹಾಸನ್ ನಟನೆ ಕನ್ ಫರ್ಮ್ ಎನ್ನಲಾಗ್ತಿದೆ.. ಕಮಲ್ ಹಾಸನ್ ಕಥೆ ಕೇಳಿ ಫುಲ್ ಖುಷ್ ಆಗಿ ಸಿನಿಮಾಗೆ ಓಕೆ ಎಂದಿದ್ದಾರೆ ಎನ್ನಲಾಗಿದೆ.