ಸದ್ಯ ಡಿವೋರ್ಸ್ ನಂತರ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಬೋಲ್ಡ್ ಪಾತ್ರಗಳಲ್ಲೂ ಕಾಣಿಸಿಕೊಳ್ತಿದ್ದಾಋಎ.. ಪುಷ್ಪದಲ್ಲಿ ಮೊದಲ ಐಟಂ ಹಾಡಿಗೆ ಸೊಂಟ ಬಳುಕಿಸಿ ಆಲ್ ಓವರ್ ಇಂಡಿಯಾ ಸಮಂತಾ ಕ್ರೇಜ್ ಹೆಚ್ಚಾಗಿದೆ.. ಪ್ರಸ್ತುತ ಬಾಲಿವುಡ್ ಹಾಲಿವುಡ್ ಗೆ ಹಾರುವ ತಯಾರಿ ನಡೆಸುತ್ತಿದ್ದಾರೆ.. ಈ ನಡುವೆ ಸ್ಯಾಮ್ ಹಾಗೂ ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾ ಖುಷಿ ಶೂಟಿಂಗ್ ಹಂತದಲ್ಲಿದ್ದು ಈ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಭಾರೀ ಸದ್ದು ಮಾಡಿದೆ..
ಇದೀಗ ಸಿನಿಮಾದ ಬಗ್ಗೆ ಒಂದು ಅಪ್ ಡೇಟ್ ಸಿಕ್ಕಿದೆ..
ಇಂಟೆನ್ಸ್ ಸ್ಟೋರಿಯಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ವಿಜಯ್ ಮತ್ತು ಸ್ಯಾಮ್ ನಡುವಿನ ಚುಂಬನದ ದೃಶ್ಯಗಳು ಹೆಚ್ಚು ಇರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.
ಕಥೆಗೆ ಬೇಡಿಕೆ ಬಂದ ಕಾರಣ ನಿರ್ದೇಶಕ ಶಿವ ನಿರ್ವಾಣ ಈ ದೃಶ್ಯಗಳನ್ನು ಕ್ರಿಯೇಟ್ ಮಾಡಿದ್ದಾರೆ ಎಂದು ತಿಳಿದು ಬರುತ್ತಿದೆ.
ವಿಜಯ್-ಸಮಂತಾ ಲಿಪ್ಲಾಕ್ ದೃಶ್ಯಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.
ಈ ಸುದ್ದಿ ಎಷ್ಟು ಸತ್ಯ ಅನ್ನೋದಕ್ಕೆ ಸಿನಿಮಾ ರಿಲೀಸ್ ಆಗುವವರೆಗೆ ಹೇಳಲು ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ಚಿತ್ರದ ಚಿತ್ರೀಕರಣ ಕಾಶ್ಮೀರ ಮತ್ತು ಸುತ್ತಮುತ್ತ ನಡೆಯುತ್ತಿದೆ.