ಯುವ ಪ್ರತಿಭೆ ಕಣ್ಣಲ್ಲಿ ಸಿನಿಮಾ ಕನಸು…ಕಂಟೆಂಟ್ ಕಿರುಚಿತ್ರಗಳ ಸಾರಥಿ ಪ್ರಸಾದ್
ಕನ್ನಡ ಸಿನಿಮಾ ಲೋಕಕ್ಕೆ ದಿನ ಕಳೆದಂತೆ ಹೊಸ ಹೊಸ ಪ್ರತಿಭೆಗಳ ಆಗಮನವಾಗ್ತಿದೆ. ಅದೃಷ್ಟದ ಜೊತೆಗೆ ಟ್ಯಾಲೆಂಟ್ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರ್ತಾರೆ. ಈಗ ಅಂತಹದ್ದೇ ಉತ್ಸಾಹ, ಹುಮ್ಮಸ್ಸಿನೊಂದಿಗೆ ಅಡಿ ಇಟ್ಟಿರುವ ಯುವ ಪ್ರತಿಭೆ ಪ್ರಸಾದ್.
ಮೂಲತಃ ಚನ್ನಪಟ್ಟಣದವರಾದ ಪ್ರಸಾದ್ ಗೆ ಬಾಲ್ಯದಲ್ಲೂ ಬಣ್ಣದ ಲೋಕದ ಮೇಲೆ ತುಸ ಹೆಚ್ಚಾಗಿಯೇ ಒಲವಿತ್ತು. ಅಪ್ಪನ ಆಸೆಯಂತೆ ಡಿಪ್ಲೋಮಾ ಓದು ಮುಗಿದ ನಂತ್ರ ಪ್ರಸಾದ್ ಸಿನಿಮಾಲೋಕದತ್ತ ಮುಖ ಮಾಡಿದರು. ಹಾಗಂತ ಸಿನಿಮಾದಲ್ಲಿ ನಟಿಸುವ ಕನಸು ಪ್ರಸಾದ್ ಅವರಿಗಿಲ್ಲ. ಬದಲಾಗಿ ನಿರ್ದೇಶನ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ತಾವೇ ಐದು ವಿಭಿನ್ನ ಬಗೆಯ ಕಿರುಚಿತ್ರಗಳನ್ನು ಮಾಡಿ ಪೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.
ಟ್ಯಾಕ್ಸಿ, ಟ್ರಾನ್ಸ್ ಪರೆಂಟ್, ಮಾಸ್ಕ್: ಪ್ರಣಮಾ, ಥ್ಯಾಂಕೂ ಯೂ, ಸಂಗಮ ಸಮಾಗಮಾ ಎಂಬ ಶಾರ್ಟ್ ಮೂವೀಗೆ ಆಕ್ಷನ್ ಕಟ್ ಹೇಳಿರುವ ಪ್ರಸಾದ್ ಹಾಸ್ಟೆಲ್ ಡೇಸ್ ಎಂಬ ಆಲ್ಬಂ ಹಾಡೊಂದನ್ನು ನಿರ್ದೇಶನ ಮಾಡುವುದರ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ವಿಶೇಷ ಅಂದ್ರೆ ತಮ್ಮದೇ ಸ್ಕೂಲ್ ಬ್ಯಾಚ್ ಫ್ರೆಂಡ್ಸ್ ಹಾಗೂ ಶಿಕ್ಷಕರು ಈ ಹಾಡಿನಲ್ಲಿ ನಟಿಸಿದ್ದಾರೆ. ಸದಾ ಒಂದಲ್ಲ ಒಂದು ಕ್ರಿಯೇಟಿವಿಟಿಯಾಗಿ ತಮ್ಮ ಚಾಕಚಕ್ಯತೆ ತೋರಿಸುವ ಪ್ರಸಾದ್ ಮುಂದೆ ಸಿನಿಮಾ ನಿರ್ದೇಶನ ಸದ್ಯದಲ್ಲಿಯೇ ಪೂರ್ಣಪ್ರಮಾಣದ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಅಂದ್ರೆ ಈ ವರ್ಷದಲ್ಲಿ ಪ್ರಸಾದ್ ಸಾರಥ್ಯದಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ.