ಟಾಲಿವುಡ್ ನ ಸ್ಟಾರ್ ನಟ ಬಾಲಕೃಷ್ಣ ಹಾಗೂ ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ನಟಿಸುತ್ತಿರುವ ತೆಲುಗಿನ ಸಿನಿಮಾ ಬಾಲಕೃಷ್ಣ ಅವರ 107 ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ.. ಸಿನಿಮಾದ 2ನೇ ಹಂತದ ಶೂಟಿಂಗ್ ಶುರುವಾಗಿದೆ.
ಇದೀಗ ಸಿನಿಮಾದ ಟೈಟಲ್ ರಿವೀಲ್ ಆಗಿದ್ದು ಸಿನಿಮಾಗೆ ಬಾಲಕೃಷ್ಣ ಅವರದ್ದೇ ಹೆಸರಿಡಲಾಗಿದೆ.. ಮೊದಲಿಗೆ ಈ ಸಿನಿಮಾಗೆ ಅಣ್ಣಗಾರು ಎಂದು ಟೈಟಲ್ ಇಡುವ ಬಗ್ಗೆ ಚರ್ಚೆಯಾಗಿತ್ತು.. ಆದ್ರೀಗ ಸಿನಿಮಾದ ಟೈಟಲ್ ಬದಲಾಗಿರೋದು ಆಶ್ಚರ್ಯ ಮೂಡಿಸಿದೆ.. ಅಂದ್ಹಾಗೆ ಸಿನಿಮಾಗೆ ‘ಜೈ ಬಾಲಯ್ಯ’ ಎಂದು ಹೆಸರಿಡಲಾಗಿದೆ.
ಈ ಸಿನಿಮಾದಲ್ಲಿ ನಟಿಸುವ ಮೂಲಕ ದುನಿಯಾ ವಿಜಯ್ ಟಾಲಿವುಡ್ ಗೆ ಪಾದಾರ್ಪಣೆ ಮಾಡ್ತಿರೋದು ವಿಶೇಷ..
ಈ ಸಿನಿಮಾದಲ್ಲಿ ವಿಜಯ್ ವಿಲನ್ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿದ್ದಾರೆ,..