ಮೇ 28ರ ಶನಿವಾರದಂದು ವೇದಿಕೆಯ ಮೇಲೆ ಹಾಡು ಹಾಡುತ್ತಲೇ ಖ್ಯಾತ ಮಲಯಾಳಂ ಗಾಯಕರಾದ ಎಡವ ಬಶೀರ್ ಅವರು ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆ. ಕೇರಳದಲ್ಲಿ ಆರ್ಕೆಸ್ಟ್ರಾವನ್ನು ಜನಪ್ರಿಯಗೊಳಿಸುವಲ್ಲಿ ಎಡವ ಬಶೀರ್ ಪ್ರಮುಖ ಪಾತ್ರ ವಹಿಸಿದ್ದಾರೆ.
87 ವರ್ಷದ ಗಾಯಕ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಆಚರಣೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. 1978 ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಟೂಟ್ ಟಾಯ್ಸ್ನ ಪ್ರಸಿದ್ಧ ಭಾರತೀಯ ಗಾಯಕ ಕೆಜೆ ಯೇಸುದಾಸ್ ಅವರ ‘ಮಾನ ಹೋ ತುಮ್ ಬೇಹದ್ ಹಸೀನ್…’ ಹಾಡನ್ನು ಹಾಡುವಾಗ ಬಶೀರ್ ಕುಸಿದುಬಿದ್ದರು.
ಅವರು ಹಾಡನ್ನು ಹಾಡುತ್ತಿದ್ದಾಗ, ವೇದಿಕೆಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುವಾಗ ಅವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾರೆ. ಅವರ ಕೈಯಿಂದ ಮೈಕ್ ಬಿದ್ದಿದ್ದು ಗಾಬರಿಗೊಂಡು ಸ್ಥಳೀಯರು ಅವರನ್ನ ಸುತ್ತುವರೆದಿದ್ದಾರೆ. ಬಶೀರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.. ಆದರೆ ವೈದ್ಯರು ಅವರು ಅಷ್ಟ್ರಲಲ್ಲೇ ನಿಧನ ಹೊಂದಿದ್ದಾಗಿ ಖಚಿತಪಡಿಸಿದ್ದಾರೆ..