ಕೇರಳದ ಖ್ಯಾತ ಬಹುಭಾಷಾ ನಟಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ (2017) ದಲ್ಲಿ ಅನೇಕರ ಹೆಸರುಗಳಿದ್ದು , ನಟ ದಿಲೀಪ್ ಕುಮಾರ್ ಸಹ ಪ್ರಮುಖ ಆರೋಪಿಯಾಗಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು..
ಅಂದ್ಹಾಗೆ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಗೋಸ್ಕರ ನಟಿಗೆ ಕಿರುಕುಳ ನೀಡಲಾಗಿದೆ ಎಂಬುದನ್ನ ಸಾಬೀತು ಪಡಿಸುವಂತಹ ಸ್ಪೋಟಕ ವಾಯ್ಸ್ ಮೆಸೇಜ್ ಒಂದು ಇತ್ತೀಚೆಗೆ ವೈರಲ್ ಆಗಿ , ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು..
ಇದೀಗ ಪ್ರಕರಣದಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ..
ಮಲಯಾಳಂ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು ಎನ್ನಲಾಗಿದೆ. ತನಿಖೆಯ ವೇಳೆ ಸಂಗ್ರಹಿಸಲಾದ ಡಿಜಿಟಲ್ ಡೇಟಾದಲ್ಲಿ ಆರೋಪ ಎದುರಿಸುತ್ತಿರುವ ನಟ ದಿಲೀಪ್ ಅವರ ಸಹೋದರ ಅನೂಪ್ ಫೋನ್‌ನಿಂದ ಕೆಲವು ಫೋಟೊಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಟಿಯ ವಿರುದ್ಧ ಲೈಂಗಿಕ ಕಿರುಕುಳದ ವೀಡಿಯೋಗಳಿವೆ ಮತ್ತು ದೃಶ್ಯದ ಸಾಕ್ಷಿಗಾಗಿ ಫೋಟೊಗಳನ್ನು ಸಹ ತೆಗೆದುಕೊಳ್ಳಲಾಗಿದೆ ಎನ್ನಲಾಗಿತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಯೇ ಅನೂಪ್ ಮೊಬೈಲ್ ನಿಂದ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಈ ದೃಶ್ಯಗಳ ನಕಲು ದಿಲೀಪ್ ಬಳಿ ಇರಬಹುದು ದಿಲೀಪ್ ಬಳಿ ನಕಲು ಇರಬಹುದು ಪ್ರಕರಣದ ತನಿಖೆಯ ವೇಳೆ ದೃಶ್ಯಗಳನ್ನು ಅನೂಪ್ ಮೊಬೈಲ್‌ನಿಂದಲೇ ರಿಕವರಿ ಮಾಡಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಕುಮಾರ್ ಬಳಿಯೂ ದಾಳಿ ಮಾಡಿದ ವಿಡಿಯೋ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.