ಬಾಲಿವುಡ್ ನ ಡ್ರಾಮಾ ಕ್ವೀನ್ ಎಂದ್ರೆ ಅದು ರಾಕಿ ಸಾವಂತ್.. ಆಗಾಗ ಅವರು ಬಟ್ಟೆ , ವಿವಾದಗಳು , ವಿಚಿತ್ರ ವರ್ತನೆ , ಇಲ್ಲ ಪ್ರೇಮಿ , ಪತಿ ವಿಚಾರವಾಗಿಯೇ ಸುದ್ದಿಯಲ್ಲಿರೋದು ಹೆಚ್ಚು.. ಇತ್ತೀಚೆಗೆ ಅವರು ಮೈಸೂರಿನ ಹುಡುಗನ ಜೊತೆಗೆ ಪ್ರೀತಿಯಲ್ಲಿರೋದಾಗಿ ಹೇಳಿಕೊಂಡಿದ್ದರು..
ಇದೀಗ ತಮ್ಮ ಹೊಸ ಬಾಯ್ ಫ್ರೆಂಡ್ ಜೊತೆಗೆ ದುಬೈ ಟ್ರಿಪ್ ಹೋಗಿ ಬಂದಿದ್ಧಾರೆ.. ದುಬೈ ಪ್ರವಾಸ ಮುಗಿಸಿಕೊಂಡು ವಾಪಸ್ ಬಂದು ಮುಂಬೈ ಏರ್ಪೋಟ್ ನಲ್ಲಿ ಕಾಣಿಸಿಕೊಂಡಿರುವ ರಾಕಿ ಸಾವಂತ್ ಹುಡುಗನ ತೊಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡೆ ಕ್ಯಾಮೆರಾಗಳಿಗೆ ಫೋಸ್ ಕೊಟ್ಟಿದ್ದಾರೆ.
ಅಂದಹಾಗೆ ರಾಕಿ ಡಿವೋರ್ಸ್ ಪಡೆದ ನಂತರ ಮೈಸೂರಿನ ಆದಿಲ್ ಎಂಬ ಹುಡುಗನ ಜೊತೆ ತಿರುಗುತ್ತಿದ್ದಾರೆ. ಮಾಧ್ಯಮಗಳಿಗೆ ಆ ಹುಡುಗನನ್ನು ಲವರ್ ಎಂದೇ ಪರಿಚಯಿಸುತ್ತಿದ್ದಾರೆ. ಈಗಾಗಲೇ ರಾಕಿ ಲವರ್ ಒಂದು ಬಿಎಮ್ ಡಬ್ಲು ಕಾರು ಮತ್ತು ದುಬೈನಲ್ಲಿ ಒಂದು ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನಂತೆ. ಈ ವಿಷಯವನ್ನು ಸ್ವತಃ ರಾಕಿ ಸಾವಂತ್ ಅವರೇ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ತಾವಚು ಧರಿಸುವ ಬಟ್ಟೆ ವಿಚಾರವಾಗಿ ಮಾತನಾಡಿರುವ ರಾಕಿ ಆದಿಲ್ ಕುಟುಂಬದವರು ನಾನು ಹಾಕುವ ಬಟ್ಟೆಗಳನ್ನು ಇಷ್ಟ ಪಡುವುದಿಲ್ಲ. ಹಾಗಾಗಿ ನಾನು ತುಂಡುಡುಗೆ ಬಿಟ್ಟು, ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತೇನೆ. ಅವರು ನನ್ನನ್ನು ಹೇಗೆ ನೋಡಲು ಇಷ್ಟ ಪಡುತ್ತಾರೋ ಹಾಗೆಯೇ ಇರುತ್ತೇನೆ ಎಂದು ಹೇಳಿದ್ದಾರೆ.