ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ಮೌನಿ ರಾಯ್ ಮತ್ತು ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾದ ಟೀಸರ್ ರಿಲೀಸ್ ಆಗಿದೆ.. ಈ ರೋಚಕ ಟೀಸರ್ ನ ಕೊನೆಯಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ದಿನಾಂಕವನ್ನೂ ಪ್ರಕಟಿಸಲಾಗಿದೆ..
ಬಾಲಿವುಡ್ ನ ಬಹುನಿರೀಕ್ಷಿತ ಮೈಥಲಾಜಿಕಲ್ ಫ್ಯಾಂಟಸಿ ಚಿತ್ರ ‘ಬ್ರಹ್ಮಾಸ್ತ್ರ ಭಾಗ ಒಂದು: ಶಿವ’ ಚಿತ್ರದ ಟ್ರೈಲರ್ ಜೂನ್ 15 ರಂದು ಅನಾವರಣಗೊಳ್ಳಲಿದೆ. 36 ಸೆಕೆಂಡ್ ಗಳ ವೀಡಿಯೊದ ಝಲಕ್ ಮೂಲಕ ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ಘೋಷಣೆ ಮಾಡಲಾಗಿದೆ.
ಬಿಡುಗಡಯಾಗಿರುವ ಸ್ಪೆಷಲ್ ವೀಡಿಯೋದಲ್ಲಿ ರಣಬೀರ್ ಶಿವನಾಗಿ ಮತ್ತು ಆಲಿಯಾ ಇಶಾಳಾಗಿ ಚಂಡಮಾರುತದಲ್ಲಿ ಸಿಕ್ಕಿ ಬೀಳುವುದನ್ನು ತೋರಿಸುತ್ತದೆ.
ಈ ಚಿತ್ರವು ಭಗವಾನ್ ಶಿವನ ಪುರಾಣ ಮತ್ತು ಸರ್ವಶಕ್ತ ಬ್ರಹ್ಮಾಸ್ತ್ರವನ್ನು ಆಧರಿಸಿದ ಫ್ಯಾಂಟಸಿ ಟ್ರೈಲಾಜಿಯ ಮೊದಲ ಭಾಗವಾಗಿದೆ. ‘ಬ್ರಹ್ಮಾಸ್ತ್ರ ಭಾಗ 1: ಶಿವ’ ಎಂಬುದು “ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು ಮತ್ತು ಕಥೆಗಳಿಂದ ಸ್ಫೂರ್ತಿ ಪಡೆದ ಹೊಸ ಮೂಲ ಸಿನಿಮೀಯ ವಿಶ್ವವಾಗಿದೆ.
ಜೀ5 ಒಟಿಟಿಯಲ್ಲಿಯೂ ದಾಖಲೆ ಬರೆದ ‘RRR’….ಚಿತ್ರಪ್ರೇಮಿಗಳಿಗೆ ಧನ್ಯವಾದ ತಿಳಿಸಿದ ತಾರಕ್-ರಾಮ್
https://www.instagram.com/tv/CeNvWSkotBO/?utm_source=ig_web_copy_link