KGF-2 : ನರೇಂದ್ರ ಮೋದಿ ಮೈದಾನದಲ್ಲಿ ಯಶ್ ಹವಾ..!!
ಇಂಡಿಯನ್ ಪ್ರಿಮಿಯರ್ ಲೀಗ್ ಹಬ್ಬಕ್ಕೆ ಭಾನುವಾರ ತೆರೆಬಿದ್ದಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿದೆ.
ಆ ಮೂಲಕ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಚಾಂಪಿಯನ್ ಆಗಿದೆ. ಇದು ಈಗ ಇತಿಹಾಸ.
ಆದ್ರೆ ಪಂದ್ಯ ಆರಂಭಕ್ಕೂ ಮುನ್ನಾ ಮೈದಾನದಲ್ಲಿ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ಬಾಲಿವುಡ್ ಸ್ಟಾರ್ ನಟ ರಣ್ ವೀರ್ ಸಿಂಗ್ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ವೇಳೆ ನಟ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಡೈಲಾಗ್ ಗೆ ರಣ್ ವೀರ್ ಲಿಪ್ ಸಿಂಕ್ ಮಾಡಿದರು.
ಅಲ್ಲದೇ ಧೀರ ಧೀರ ಸುಲ್ತಾನ ಹಾಡಿಗೆ ಹೆಜ್ಜೆ ಹಾಕಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೆಜಿಎಫ್ ಚಿತ್ರತಂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
ಅಲ್ಲದೇ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದೆ.