ನಟ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಬ್ಯುಸಿ ಇರುವ ಪ್ರಶಾಂತ್ ನೀಲ್, ಸಿನಿಮಾದ ಬಜೆಟ್ ಅನ್ನು ಜಾಸ್ತಿ ಮಾಡಿದ್ದಾರಂತೆ.
ಈ ಹಿಂದೆ 200 ಕೋಟಿ ರುಪಾಯಿಯಲ್ಲಿ ಸಿನಿಮಾ ಮಾಡಲು ಚಿತ್ರತಂಡ ನಿರ್ಧಾರ ಮಾಡಿತ್ತು.
ಆದ್ರೆ ಕೆಜಿಎಫ್ ಸಿನಿಮಾದಲ್ಲಿನ ಆಕ್ಷನ್ ಸೀನ್ ಗಳಿಗೆ ಭಾರಿ ರೆಸ್ಪಾನ್ಸ್ ಬಂದ ಕಾರಣ, ಸಲಾರ್ ನಲ್ಲಿ ಆಕ್ಷನ್ ಸೀನ್ ಗಳಿಗಾಗಿ 50 ಕೋಟಿ ರುಪಾಯಿ ಹೆಚ್ಚಳ ಮಾಡಲು ಚಿತ್ರತಂಡ ಮುಂದಾಗಿದೆ ಅಂತ ಹೇಳಲಾಗುತ್ತಿದೆ. ಅಂದರೇ ಸಿನಿಮಾದ ಬಜೆಟ್ 250 ಕೋಟಿ ರೂಪಾಯಿಗೂ ಅಧಿಕವಾಗಲಿದೆಯಂತೆ.
ಕೆಜಿಎಫ್ ಸಿನಿಮಾದಲ್ಲಿ ಹೀರೋ ಎಲಿವೇಷನ್ ಮತ್ತು ಆಕ್ಷನ್ ಸೀನ್ ಗಳು ಭಾರಿ ಮೆಚ್ಚುಗೆ ಪಡೆದುಕೊಂಡಿದೆ.
ಇದೇ ಸ್ಟಾಂಡರ್ಡ್ ನಲ್ಲಿ ಸಲಾರ್ ಸಿನಿಮಾದ ಆಕ್ಷನ್ ಸೀನ್ ಗಳು ಇರಬೇಕು ಎಂದು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಹೀಗಾಗಿಯೇ ಸಿನಿಮಾದ ಬಜೆಟ್ ಅನ್ನ ಹಿಗ್ಗಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.