ನಟ ನಾಗ ಚೈತನ್ಯ ಜೊತೆ ಡಿವೋರ್ಸ್ ಪಡೆದುಕೊಂಡ ಬಳಿಕ ನಟಿ ಸಮಂತಾ ಟ್ರೋಲ್ ಆಗಿದ್ದೇ ಹೆಚ್ಚು.
ಸೋಶಿಯಲ್ ಮೀಡಿಯಾದಲ್ಲಿ ಸ್ಯಾಮ್ ಯಾವುದೇ ಪೋಸ್ಟ್ ಹಾಕಿದ್ರೂ ಟ್ರೋಲ್ ಆಗುತ್ತಲೇ ಇದ್ದಾರೆ.
ಟೀಕೆಗಳನ್ನು ಎದುರಿಸುತ್ತಲೇ ಇದ್ದಾರೆ. ಇದು ಸ್ಯಾಮ್ ಗೂ ಕೂಡ ಸಾಮಾನ್ಯ ಎಂಬಂತಾಗಿದೆ.
ಆದ್ರೆ ಇದೀಗ ಓರ್ವ ನೆಟ್ಟಿಗನೊಬ್ಬನ ಕಮೆಂಟ್ ಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ. ಡಿವೋರ್ಸ್ ಬಳಿಕ ಸ್ಯಾಮ್ ವರ್ಕೌಟ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಹೀಗಾಗಿ ಟೈಮ್ ಇಕ್ಕಾಗಲೆಲ್ಲಾ ಜಿಮ್ ನಲ್ಲಿ ಟೈಂ ಪಾಸ್ ಮಾಡುತ್ತಿರುತ್ತಾರೆ. ಅದೇ ರೀತಿ ಜಿಮ್ ನಲ್ಲಿರುವ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಅದರಂತೆ ಮೊನ್ನೆ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ನಾಯಿ ಜೊತೆ ಇದ್ದ ಫೋಟೋವನ್ನು ಸ್ಯಾಮ್ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಈ ಫೋಟೋಗೆ ಸ್ಯಾಮ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ ಓರ್ವ ನೆಟ್ಟಿಗ ನೀನು ನಾಯಿಯ ಜೊತೆಯಲ್ಲಿ ಒಂಟಿಯಾಗಿ ಸಾಯ್ತೀಯಾ ಅಂತಾ ಕಮೆಂಟ್ ಮಾಡಿ ಶಾಪ ಹಾಕಿದ್ದಾರೆ.
ಈ ಕಾಮೆಂಟ್ ಗೆ ಕೂಲ್ ಆಗಿಯೇ ಉತ್ತರ ಕೊಟ್ಟಿರುವ ಸ್ಯಾಮ್ ಅಂತಹ ಅದೃಷ್ಠ ನನಗೆ ಸಿಗಲಿ ಎಂದು ತಿರುಗೇಟು ನೀಡಿದ್ದಾರೆ.
ಇದು ಒಂದು ಕಡೆಯಾದ್ರೆ ಒಂಟಿಯಾಗಿ ಸಾಯ್ತಿಯಾ ಅಂತ ಕಮೆಂಟ್ ಮಾಡಿದ್ದ ವ್ಯಕ್ತಿಗೆ ಸ್ಯಾಮ್ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ಆ ವ್ಯಕ್ತಿಯ ಟ್ವೀಟ್ ಡಿಲೀಟ್ ಆಗಿದೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೇ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ಯಾಮ್, ಸದ್ಯ ವಿಜಯ್ ದೇವರಕೊಂಡ ಅವರೊಂದಿಗೆ ಖುಷಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಈ ಇಬ್ಬರ ನಡುವೆ ಲಿಪ್ ಲಾಕ್ ಸೀನ್ ಇದೆ ಎಂದು ಟಾಲಿವುಡ್ ನಲ್ಲಿ ಮಾತುಗಳು ಹರಿದಾಡುತ್ತಿವೆ.