ಇತ್ತೀಚೆಗೆ ವೇದಿಕೆಯ ಮೇಲೆಯೇ ಕುಸಿದು ಹಠಾತ್ ನಿಧನರಾದ ಖ್ಯಾತ ಬಹುಭಾಷಾ ಗಾಯಕ ಕೆಕೆ ಅವರ ಅಗಲಿಕೆ ಸಿನಿಮಾರಂಗದಲ್ಲಿ ಆಘಾತ ಮೂಡಿಸಿದೆ.. ಅಭಿಮಾನಿಗಳು ನೀವಿನಲ್ಲಿದ್ದಾರೆ..
ನಿನ್ನೆ ರಾತ್ರಿ ಅವರು ಕೋಲ್ಕತ್ತದಲ್ಲಿ ಲೈವ್ ಶೋ ನಡೆಸುತ್ತಿದ್ದರು. ಕಾರ್ಯಕ್ರಮದ ನಡುವೆಯೇ ಅವರ ದೇಹ ಬಳಲಿದಂತೆ ಅನಿಸಿ ತಕ್ಷಣ ವೇದಿಕೆಯಂತೆ ಹೊರನಡೆದಿದ್ದಾರೆ..
ಬಾಡಿಗಾರ್ಡ್ ಗಳ ಜೊತೆಗೆ ಕೆಕೆ ಅವರನ್ನು ಹೋಟೆಲ್ ಗೆ ಕಳುಹಿಸಿ ಕೊಡಲಾಗಿದೆ. ಸ್ವಲ್ಪ ಹೊತ್ತು ವಿಶ್ರಾಂತಿ ತಗೆದುಕೊಂಡು ಮತ್ತೆ ಬರುವೆ ಎಂದು ಕೆಕೆ ಹೇಳಿಯೇ ಹೋಗಿದ್ದರಂತೆ. ಆದ್ರೆ ಹೋಟೆಲ್ ಗೆ ಹೋದ ನಂತರ ಆರೋಗ್ಯದಲ್ಲಿ ತೀರಾ ಏರು ಪೇರುಂಟಾಗಿದೆ. ಹಾಗಾಗಿ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದ್ರೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮುಖ ಮತ್ತು ತೆಲೆಗೆ ಪೆಟ್ಟಾಗಿದ್ದು ಕಂಡು ಬಂದಿದೆ. ಅದಕ್ಕೆ ಕಾರಣ, ಕೆಕೆ ಅವರು ಹೋಟೆಲ್ ನಲ್ಲಿ ಕುಸಿದು ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮುಖ ಮತ್ತು ತೆಲೆಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ತನಿಖೆ ಕೂಡ ನಡೆಸಲಾಗುತ್ತಿದೆ.