ಕೋಲ್ಕತ್ತಾ : ಬಾಲಿವುಡ್ ನ ಖ್ಯಾತ ಗಾಯಕ, ಕೆಕೆ ಎಂದೇ ಹೆಸರಾಗಿದ್ದ ಕೃಷ್ಣ ಕುಮಾರ್ ಕುನ್ನತ್ ಅವರು ನಿಧನರಾಗಿದ್ದಾರೆ.
ಅವರು ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ನಂತರ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಕೋಲ್ಕತ್ತಾದ ನಜ್ರುಲ್ ಮಂಚಾ ಆಡಿಟೋರಿಯಂನಲ್ಲಿ ಕೆಕೆ ಸಂಗೀತ ಕಚೇರಿ ನಡೆಸಿದ್ದರು. ನಂತರ ತಾವು ತಂಗಿದ್ದ ಹೋಟೆಲ್ ಗೆ ತೆರಳುತ್ತಿದ್ದಾಗ ಮೆಟ್ಟಿಲ ಮೇಲೆ ಕುಸಿದು ಬಿದ್ದರು.
ಅಧಿಕಾರಿಗಳ ಮಾಹಿತಿ ಪ್ರಕಾರ ಸಂಗೀತ ಕಚೇರಿಯಲ್ಲಿ ಕೆಕೆ ಅವರು ಸುಮಾರು ಒಂದು ಗಂಟೆಗಳ ಕಾಲ ಹಾಡಿದ್ದು, ಹೋಟೆಲ್ ತಲುಪಿದ ನಂತರ ಅಸ್ವಸ್ಥರಾಗಿದ್ದರಂತೆ.
ಕೂಡಲೇ ಅವರನ್ನು ದಕ್ಷಿಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಹೇಳಿದ್ದಾರೆ.