ಹೆಚ್ಚಾಗಿ ಹಾರರ್ , ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಮೂಲಕವೇ ಫೇಮಸ್ ಆಗಿರುವ ‘ಸುಂದರಿ’ ಪೂರ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ..
ಕನ್ನಡ , ತಮಿಳು , ಮಲಯಾಳಂ , ತೆಲುಗು ಸಿನಿಮಾಗಳಲ್ಲಿ ನಟಿ ಪೂರ್ಣ ಬಣ್ಣ ಹಚ್ಚಿಸಿದ್ದಾರೆ.. ‘ಜೋಶ್’ ಸಿನಿಮಾದ ಮೂಲಕ ಪೂರ್ಣ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ್ದರು.. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ ಭಾವಿ ಪತಿಯನ್ನು ಪರಿಚಯಿಸಿದ್ದಾರೆ.
ಅಂದ್ಹಾಗೆ ಪೂರ್ಣ ನಿಜವಾದ ಹೆಸರು ಶಾಮ್ನಾ ಕಾಸಿಮ್… ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಬಗ್ಗೆ ಶಾಮ್ನಾ ಕಾಸಿಮ್ ರಿವೀಲ್ ಮಾಡಿದ್ದೇ ತಡ , ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ.. ಅಂದ್ಹಾಗೆ ಶಾಮ್ನ ಮದುವೆಯಾಗ್ತಿರುವ ಹುಡುಗನ ಹೆಸರು ಶಾನಿದ್ ಆಸಿಫ್ ಅಲಿ..
Instagram ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಪೂರ್ಣ ನನ್ನ ಕುಟುಂಬದ ಆಶೀರ್ವಾದದ ಜೊತೆಗೆ ನಾನು ನನ್ನ ಜೀವನದ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಇದು ಅಧಿಕೃತ ಎಂದು ಹೇಳಿದ್ದಾರೆ.