ಕನ್ಯಾಕುಮಾರಿ ಧಾರಾವಾಹಿ ಖ್ಯಾತಿಯ ನಟಿ ರಶ್ಮಿತಾ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿ
ದ್ದಾರೆ.. ಕನ್ಯಾಕುಮಾರಿಯಲ್ಲಿ ಯಾಮಿನಿಯಾಗಿ ಮಿಂಚುತ್ತಿರುವ ರಶ್ಮಿತಾ ಶೆಟ್ಟಿ ತ್ರಿವೇಣಿ ಸಂಗಮ, ಸುಬ್ಬಲಕ್ಷ್ಮಿ ಸಂಸಾರ, ಬ್ರಹ್ಮಾಸ್ತ್ರ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಚಿರಪರಿಚಿತರಾಗಿದ್ದಾರೆ.
ರಶ್ಮಿತಾ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2019ರ ಕೃಷ್ಣ ಗಾರ್ಮೆಟ್ಸ್ ಸಿನಿಮಾದಲ್ಲಿ ರಶ್ಮಿತಾ ಬಣ್ಣ ಹಚ್ಚಿದ್ದರು..
ರಶ್ಮಿತಾ ಶೆಟ್ಟಿ ಕುಟುಂಬಸ್ಥರು ಆಪ್ತರು , ಗೆಳೆಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ಧಾರೆ.. ಇವರ ವಿವಾಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು , ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ..