ಝೀರೋ ಸಿನಿಮಾ ಮಕಾಡೆ ಮಲಗಿದ ನಂತರ ಸುಮಾರು 4 ವರ್ಷಗಳ ಕಾಲ ಶಾರುಖ್ ಖಾನ್ ತೆರೆ ಮೇಲೆ ಕಾಣಿಸಿಕೊಂಡಿಲ್ಲ.. ಅವರ ಸಿನಿಮಾಗಳು ರಿಲೀಸ್ ಆಗಿಲ್ಲ.. ಇದೀಗ ಶಾರುಖ್ ರನ್ನ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಶೀಘ್ರದಲ್ಲೇ ಸಿಗಲಿದೆ..
ಆದ್ರೀಗ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಶಾರುಕ್ ಖಾನ್ ಬ್ಯುಸಿಯಾಗಿದ್ದಾರೆ.. ಸಿದ್ಧಾರ್ಥ್ ಆನಂದ್ ಜೊತೆಗೆ ಪಠಾನ್, ರಾಜ್ ಕುಮಾರ್ ಹಿರಾನಿಯ ಡಂಕಿ ಮತ್ತು ನಿನ್ನೂ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಈ ಮೂಲಕ ಜಬರ್ ದಸ್ತ್ ಕಮ್ ಬ್ದಯಾಕ್ ಗೆ ಶಾರುಕ್ ಸಜ್ಜಾಗಿದ್ದಾರೆ.. ಇದೀಗ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲೀ ಅವರೊಂದಿಗಿನ ಬಹುನಿರೀಕ್ಷೆಯ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ..
ಈ ಸ್ಟಾರ್ ಜೋಡಿ ಕಾಂಬಿನೇಷನ್ ನ ಸಿನಿಮಾದ ಟೈಟಲ್ ಫಿಕ್ಸ್ ಆಗಿದೆ ಎಂಬ ಮಾತುಗಳು ಭಾರೀ ಸದ್ದು ಮಾಡ್ತಿದೆ. ಹೊಸ ಶೀರ್ಷಿಕೆಗೆ ಸಂಬಂಧಿಸಿದ ಸುದ್ದಿ ವೈರಲ್ ಆಗ್ತಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, 25 ಶೀರ್ಷಿಕೆಗಳನ್ನು ಯೋಜಿಸಿದ ನಂತರ ಅಟ್ಲೀ ಮತ್ತು ಶಾರುಖ್ ಅಂತಿಮವಾಗಿ ಸಿನಿಮಾಗೆ ಜವಾನ್ ಎಂದು ಟೈಟಲ್ ಫೈನಲ್ ಮಾಡಿದ್ದಾರೆ ಎನ್ನಲಾಗ್ತಿದೆ.
ಈ ಮೊದಲು ಚಿತ್ರಕ್ಕೆ ಸ್ಯಾಂಕಿ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗಿತ್ತು, ಆದರೆ ಇತ್ತೀಚಿನ ಸುದ್ದಿಯಂತೆ ಜವಾನ್ ಚಿತ್ರದ ಶೀರ್ಷಿಕೆ ಎಂದು ಖಚಿತಪಡಿಸಲಾಗಿದೆ.
ಅಲ್ಲದೇ ಟೀಸರ್ ಮೂಲಕ ಚಿತ್ರದ ಟೈಟಲ್ ಅನೌನ್ಸ್ ಮಾಡಲಿದೆ ಎನ್ನಲಾಗುತ್ತಿದೆ. ವರದಿಯ ಪ್ರಕಾರ, ಟೀಸರ್ 1 ನಿಮಿಷ ಮತ್ತು 34 ಸೆಕೆಂಡ್ ಉದ್ದವಿರುತ್ತದೆ ಎನ್ನಲಾಗಿದೆ..
ಮೂಲಗಳ ಪ್ರಕಾರ, ದಕ್ಷಿಣ ಭಾರತದ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಈ ಸಿನಿಮಾದ ನಾಯಕಿಯಾಗಿ ನಟಿಸಲು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ..
ಅಲ್ಲದೆ, ಮನೋಜ್ ಬಾಜ್‌ಪೇಯಿ ಅಭಿನಯದ ಸ್ಪೈ ಥ್ರಿಲ್ಲರ್ ಸರಣಿ ದಿ ಫ್ಯಾಮಿಲಿ ಮ್ಯಾನ್‌ನಲ್ಲಿ ಸುಚಿತಾ ಪಾತ್ರದ ನಂತರ ಪ್ರಾಮುಖ್ಯತೆಗೆ ಏರಿದ ದಕ್ಷಿಣ ಭಾರತದ ಇನ್ನೊಬ್ಬ ಸುಂದರಿ- ನಟಿ ಪ್ರಿಯಾ ಮಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ ಎನ್ನಲಾಗಿದೆ..