ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ವಿವಾದಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ವಿವಾದಗಳೇ ಕಂಗನಾರನ್ನ ಬಿಟ್ರೂ ವಿವಾದಗಳು ಕಂಗನಾ ಬೆನ್ನು ಬಿಡಲ್ಲ.. ಎಷ್ಟು ಒಳ್ಳೆ ನಟಿ ಎಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ 100 ಪಟ್ಟು ವಿವಾದಗಳ ಮೂಲಕವೇ , ಸದಾ ಏನಾದ್ರೂ ಒಂದು ವಿಚಾರವನ್ನ , ಯಾರದರೂ ಒಬ್ರನ್ನ ವಿರೋಧಿಸುತ್ತಲೇ , ನೇರವಾಗಿ ಮಾತನಾಡ್ತಾ ದಿಟ್ಟತನ ಪ್ರದರ್ಶಿಸುವ ನಟಿ..
ಇತ್ತೀಚೆಗೆ ಅವರ ಬಹುನಿರೀಕ್ಷೆಯ ಧಾಕಡ್ ಸಿನಿಮಾ ಅಟ್ಟರ್ ಫ್ಲಾಪ್ ಆಗಿ ಕಂಗನಾಗೆ ಸೋಲಿನ ರುಚಿ ಸಿಕ್ಕಿದೆ.. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಇದೀಗ ಕಾಣದ ಕೈಗಳ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಐವತ್ತು ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾದ ಧಾಕಡ್ ಸಿನಿಮಾ ಗಳಿಸಿದ್ದು ಮಾತ್ರ ಎರಡು ಕೋಟಿ ಎನ್ನಲಾಗಿದೆ. ಅವರ ವೃತ್ತಿ ಜೀವನದಲ್ಲೇ ಇದು ಅತಿ ದೊಡ್ಡ ಸೋಲೆಂದೇ ಹೇಳಲಾಗ್ತಿದೆ..
ಈ ಕುರಿತು ಮಾಧ್ಯಮವೊಂದರಲ್ಲಿ ಮಾತನಾಡಿರುವ ಕಂಗನಾ, ಈ ನನ್ನ ಸಿನಿಮಾ ಸೋಲಿಗೆ ಬಾಲಿವುಡ್ ಕಾರಣ ಎಂಬರ್ಥದಲ್ಲಿ ಮಾತನಾಡಿದ್ದಾರೆ.. ಸತ್ಯವನ್ನು ಹೇಳಿದ್ದಕ್ಕಾಗಿ ತಾವು ಸೋಲನ್ನು ಅನುಭವಿಸಬೇಕಾಯಿತು ಎಂದಿದ್ದಾರರೆ ಎಂದು ವರದಿಯಾಗಿದೆ..