ರಾಜಮೌಳಿ ನಿರ್ದೇಶನದಲ್ಲಿ ಆಫ್ರಿಕನ್ ಜಂಗಲ್ ಅಡ್ವೆಂಚರಸ್ ಕಥೆಯಲ್ಲಿ ಮಹೇಶ್ ಬಾಬು
ಬಾಹುಬಲಿ , ಬಾಹುಬಲಿ 2 , RRR ನಂತಹ ಸೆನ್ಷೇಷನಲ್ ಸಿನಿಮಾಗಳ ಮೂಲಕ ಇಡೀ ವಿಶ್ವಕ್ಕೆ ಸೌತ್ ಇಂಡಸ್ಟ್ರಿ ಪವರ್ ತೋರಿಸಿಕೊಟ್ಟು ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದಾರಿ ಮಾಡಿಕೊಟ್ಟ ಮೂವಿ ಮಾಂತ್ರಿಕ ರಾಜಮೌಳಿ ಅವರ ಮುಂದಿನ ಸಿನಿಮಾ ಬಗ್ಗೆ ಇಡಡೀ ದೇಶವೇ ಕುತೂಹಲದಿಂದ ಎದುರು ನೋಡ್ತಿದೆ.. ಅಂದ್ಹಾಗೆ ರಾಜಮೌಳಿ ಅವರ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆಗೆ ಅನ್ನೋ ವಿಚಾರವೂ ಗೊತ್ತೇ ಇದೆ..
ಆದ್ರೆ ಸಿನಿಮಾದ ಕಥೆ ಯಾವ ರೀತಿ ಇಇರಲಿದೆ ಎಂಬ ಕುತೂಹಲ ಸದ್ಯಕ್ಕೆ ಎಲ್ಲರನ್ನೂ ಕಾಡ್ತಿದೆ.. ಸದ್ಯಕ್ಕೆ ‘ಸರ್ಕಾರು ವಾರಿ ಪಾಟ’ ಸಿನಿಮಾದ ಸಕ್ಸಸ್ ನ ಸಂತಸದಲ್ಲಿರುವ ಮಹೇಶ್ ಬಾಬು ಅವರು ಅವರದ್ದೇ ನಿರ್ಮಾಣದ ಕನ್ನಡಿಗ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಚಿತ್ರ `ಮೇಜರ್’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೂನ್ 3 ಕ್ಕೆ ತೆರೆಕಾಣಲಿದೆ..
ಅಂದ್ಹಾಗೆ ಟಾಲಿವುಡ್ ಪ್ರಿನ್ಸ್ ಹಾಗೂ ಮೂವಿ ಮಾಂತ್ರಿಕ ರಾಜಮೌಳಿ ಅವರ ಕಾಂಬಿನೇಷನ್ ನ ಈ ಸಿನಿಮಾ ಆಫ್ರಿಕನ್ ಜಂಗಲ್ ಅಡ್ವೆಂಚರ್ ಕಥೆಯಾಗಿರಲಿದೆ ಎನ್ನಲಾಗ್ತಿದೆ.. ಆದ್ರೆ ರಾಜಮೌಳಿ ಜೊತೆಗೆ ಸಿನಿಮಾ ಮಾಡುವುದಕ್ಕೂ ಮೊದಲು ಮಹೇಶ್ ಬಾಬು ಅವರು ನಿರ್ದೇಶಕ ತ್ರಿವಿಕ್ರಮ್ ಚಿತ್ರದಲ್ಲಿ ನಟಿಸುತ್ತಿದ್ದಾರೆ..