ಕನ್ನಡ ಸಿನಿಮಾದ ಪವರ್ ಏನು ಅಅನ್ನೋದನ್ನ ಇಡೀ ವಿಶ್ವಕ್ಕೆ KGF ಅನ್ನೋ ಮಾಸ್ಟರ್ ಪೀಸ್ ಮೂಲಕ ತೋರಿಸಿಕೊಟ್ಟು ಸ್ಟಾರ್ ಡೈರೆಕ್ಟರ್ ಆಗಿ ಹೊರಹೊಮ್ಮಿರುವ ಪ್ರಶಾಂತ್ ನೀಲ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ..
ಉಗ್ರಂ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದ ಪ್ರಶಾಂತ್ ನೀಲ್ 2 ನೇ ಸಿನಿಮಾವೇ ಪ್ಯಾನ್ ಇಂಡಿಯಾ ಸಿನಿಮಾ.. ಯಶ್ ಅಭಿನಯದ KGF ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿ ಖದರ್ ಏನು ಅನ್ನೋದನ್ನ ತೋರಿಸಿತ್ತು.. KGF 2 ಬಗ್ಗೆ ಅಂತೂ ಹೇಳೋದೇ ಬೇಡ.. ಯಾವ ಲೆವೆಲ್ ಗೆ ಸಿನಿಮಾ ಕ್ರೇಜ್ ಹುಟ್ಟುಹಾಕಿತ್ತು ಅಂದ್ರೆ ಈಗಲೂ ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತಿದೆ.. ಭರ್ಜರಿ ಗಳಿಕೆ ಕಂಡಿದೆ.. ಬಾಕ್ಸ್ ಆಫೀಸ್ ಶೇಕ್ ಮಾಡಿ ಬಾಲಿವುಡ್ ಗೆ ನಡುಕ ಹುಟ್ಟಿಸಿದೆ..
ಪ್ರಸ್ತುತ ಪ್ರಶಾಂತ್ ನೀಲ್ ಅವರು ತೆಲುಗು ಸಿನಿಮಾರಂಗದಲ್ಲಿ ಸೆಟಲ್ ಆಗಿದ್ದಾರೆ.. ಪ್ರಭಾಸ್ ಸಲಾರ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿರುವ ಪ್ರಶಾಂತ್ ನೀಲ್ ಮುಂದೆ ಜ್ಯೂ. NTR ಗೆ ಸಿನಿಮಾ ಮಾಡಲಿದ್ದಾರೆ.. ಈಗಾಗಲೇ ಈ ಸಿನಿಮಾದ ಪೋಸ್ಟರ್ ಭಾರೀ ಸೌಂಡ್ ಮಾಡ್ತಿದೆ.. ಇಂದು ಪ್ರಶಾಂತ್ ನೀಲ್ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಅವರಿಗೆ ಅಭಿಮಾನಿಗಳು , ಆಪ್ತರು , ಗಣ್ಯರು ಶುಭಕೋರುತ್ತಿದ್ದಾರೆ. ಜೊತೆಗೆ ಪ್ರಶಾಂತ್ ನಿಲ್ ಹುಟ್ಟು ಹಬ್ಬವನ್ನೂ ಕೂಡ ಅದ್ದೂರಿಯಾಗಿ ಆಚರಿಸಲಾಗಿದೆ.
ಪ್ರಶಾಂತ್ ಹುಟ್ಟು ಹಬ್ಬದಲ್ಲಿ ಕೆಜಿಎಫ್ ಟೀಂ ಕಾಣಿಸಿಕೊಂಡಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಕುಟುಂಬ, ಯಶ್ ಭಾಗಿ ಆಗಿದ್ದಾರೆ. ಅಷ್ಟೇ ಅಲ್ಲಾ, ಡಾರ್ಲಿಂಗ್ ಪ್ರಭಾಸ್ ಕೂಡ ಪ್ರಶಾಂತ್ ನೀಲ್ ಹುಟ್ಟು ಹಬ್ಬದಲ್ಲಿ ಭಾಗಿ ಆಗಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಪ್ರಶಾಂತ್ ನೀಲ್ ಬೆಂಗಳೂರಿಗೆ ಬಂದಿದ್ದರು. ಇನ್ನು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಕೆಜಿಎಫ್ ಮತ್ತು ಹೊಂಬಾಳೆ ಫಿಲ್ಮ್ಸ್ ಚಿಹ್ನೆಯಲ್ಲಿ ವಿಷೇಶವಾದ ಕೇಕ್ ತಯಾರಿಸಲಾಗಿದ್ದು ವಿಶೇಷ.. ಹುಟ್ಟುಹಬ್ಬದ ಜೊತೆಗೆ ಕೆಜಿಎಫ್ 2 ಚಿತ್ರದ 50ನೇ ದಿನದ ಸಂಭ್ರಮವನ್ನೂ ಕೂಡ ಆಚರಿಸಲಾಗಿದೆ.
ಪ್ರಶಾಂತ್ ಅವರು ಜೂನ್ 4 1980ರಲ್ಲಿ ಜನಿಸಿದ್ದರು.. ತಂದೆ ಸುಭಾಷ್ ಮತ್ತು ತಾಯಿ ಭಾರತಿ. ಇವರು ಮೂಲತಃ ಆಂಧ್ರಪ್ರದೇಶದ ಮಡಕಸಿರಾ ಬಳಿಯ ನೀಲಕಂಠಪುರಂ ಗ್ರಾಮದಿಂದ ಬೆಂಗಳೂರಿಗೆ ಬಂದವರಾಗಿದ್ದಾರೆ. ಇನ್ನು, ಪ್ರಶಾಂತ್ ನೀಲ್ 2010 ರಲ್ಲಿ ಲಿಖಿತಾರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು , ಪ್ರಶಾಂತ್ ನೀಲ್ ಸಹೋದರಿ ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರನ್ನ ವಿವಾಹವಾಗಿದದ್ದಾರೆ..