2018 ರಲ್ಲಿ ಶಾರುಕ್ ಖಾನ್ ಅಭಿನಯದ ಝೀರೋ ಸಿನಿಮಾ ಫ್ಲಾಪ್ ಆದ ನಂತರದಿಂದ ನಾಲ್ಕು ವರ್ಷಗಳೇ ಕಳೆದ್ರೂ ಶಾರುಕ್ ಸಿನಿಮಾ ಬಂದಿಲ್ಲ.. ಆದ್ರೆ ಈ ನಿರಾಸೆಯಲ್ಲಿರೋ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಖುಷಿ ಸಿಗಲಿದೆ.. ಸಾಲು ಸಾಲು ಸಿನಿಮಾಗಳಲ್ಲಿ ಶಾರುಕ್ ಬ್ಯುಸಿಯಿದ್ದು ಪವರ್ ಫುಲ್ ಕಮ್ ಬ್ಯಾಕ್ ಗೆ ಸಜ್ಜಾಗಿದ್ದಾರೆ..
ಪಠಾಣ್ ಚಿತ್ರದ ಟೀಸರ್ ಅನೌನ್ಸ್ ಮೂಲಕ ಕಂಬ್ಯಾಕ್ ಘೋಷಿಸಿದ್ದ ಕಿಂಗ್ ಖಾನ್ ಮ್ತೊಂದು ಹೊಸ ಚಿತ್ರವನ್ನ ಘೋಷಿಸಿದ್ದಾರೆ. ನಿನ್ನೆ ಈ ಚಿತ್ರದ ಭರ್ಜರಿ ಟೀಸರ್ ರಿಲೀಸ್ ಮೂಲಕ ಸಿನಿಮಾದ ಹೆಸರು ಅನೌನ್ಸ್ ಮಾಡಿದ್ದಾರೆ.
ಶಾರುಖ್ ಖಾನ್ ಮುಂಬರುವ ಚಿತ್ರ ಜವಾನ್ ಎಂದು ಹೆಸರಿಡಲಾಗಿದೆ. ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ. ಈ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಶಾರುಖ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮತ್ತೊಮ್ಮೆ ಆಕ್ಷನ್ ಮೋಡ್ನಲ್ಲಿ ನೋಡಲು ಅಭಿನಾನಿಗಳು ಉತ್ಸುಕರಾಗಿದ್ದಾರೆ.
ತಮಿಳು ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿರವ ಸಿನಿಮಾಗೆ ನಾಯಕಿಯಾಗಿ ನಯನತಾರ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ದೇ ಸಿನಿಮಾಗೆ `ಜವಾನ್’ ಎಂದೇ ಟೈಟಲ್ ಫಿಕ್ಸ್ ಆಗಿದ್ಯಂತೆ.. 2023ರ ಜೂನ್ 2 ಕ್ಕೆ ಸಿನಿಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ.