ಈ ಶುಕ್ರವಾರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿವೆ.. ಅದ್ರಲ್ಲೂ ಬಹುನಿರೀಕ್ಷೆಯ ಮೂರು ಸ್ಟಾರ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಫೈಟ್ ಗೆ ಇಳಿದಿವೆ.. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಿರ್ಮಾಣದ ಕನ್ನಡಿಗ ಮೇಜರ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ‘ಮೇಜರ್’ ರಿಲೀಸ್ ಆಗಿದೆ.. ಇದರ ಜೊತೆಗೆ ಬಹುಭಾಷಾ ನಟ ಕಮಲ್ ಹಾಸನ್ ಅವರ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ವಿಕ್ರಮ್ ಸಿನಿಮಾ ರಿಲೀಸ್ ಆಗಿದೆ.. ಇದರ ಜೊತೆಜೊತೆಗೆ ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಅಭಿನಯದ ಐತಿಹಾಸಿಕ ಸಿನಿಮಾ ಸಾಮ್ರಾಟ್ ಪೃಥ್ವಿರಾಜ್ ರಿಲೀಸ್ ಆಗಿದೆ..
ಅಂದ್ಹಾಗೆ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಮತ್ತೆ ಬಾಲಿವುಡ್ ಸಿನಿಮಾ ಸೌತ್ ಸಿನಿಮಾ ಮುಂದೆ ಸೋತಿದೆ.. ಹೌದು.. ವಿಕ್ರಮ್ ಸಿನಿಮಾ ಎದುರು ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ಸಿನಿಮಾ ಪೃಥ್ವಿರಾಜ್ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ . ಆದ್ರೆ ವೀಕೆಂಡ್ ವರೆಗೂ ಬಾಕ್ಸ್ ಆಫೀಸ್ ನ ಲೆಕ್ಕಾಚಾರ ಗೊತ್ತಾಗೋದಿಲ್ಲ.. ವೀಕೆಂಡ್ ನಲ್ಲಿ ಯಾವ ಸಿನಿಮಾ ಗೆಲ್ಲುತ್ತೋ ಅದೇ ಸಿನಿಮಾಗೆ ಜನರ ಒಲವು ಹೆಚ್ಚು ಅಂತ ಹೇಳಬಹುದು,,
ಈ ಮೂರೂ ಸಿನಿಮಾಗಳಿಗೂ ಸಮಾನ ಕ್ರೇಜ್ ರೇಂಜ್ ಇದೆ.. ಸ್ಟಾರ್ ಗಳಿದ್ದಾರೆ.. ಬಾಕ್ಸ್ ಆಫೀಸ್ ನಲ್ಲಿ ಸಮಬಲದ ಫೈಟ್ ಇರಲಿದೆ.. ಪ್ರೇಕ್ಷಕರು ಯಾವ ಸಿನಿಮಾಗೆ ಮಣೆ ಹಾಕ್ತಾರೆ ಬಾಕ್ಸ್ ಆಫೀಸ್ ನಲ್ಲಿ ಯಾವ ಸಿನಿಮಾ ಗೆಲ್ಲುತ್ತೆ.. ಯಾವ ಸಿನಿಮಾ ಕಲೆಕ್ಷನ್ ಅಧಿಕ ಇದೆಲ್ಲವನ್ನೂ ಕಾದು ನೋಡ್ಬೇಕಿದೆ..
ಆದ್ರೆ ಈ ಮೂರೂ ಸಿನಿಮಾಗಳು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ರಿಲೀಸ್ ಆಗಿರೋದು ವಿಶೇಷ..
ಸಾಮ್ರಾಟ್ ಪೃಥ್ವಿರಾಜ್ 10.40 ಕೋಟಿ ರೂಪಾಯಿ ಗಳಿಸಿದೆ.. 300 ಕೋಟಿ ಬಜೆಟ್‌ನ ಸಿನಿಮಾ, ಮೊದಲ ದಿನ 10 ಕೋಟಿ ಗಳಿದ್ದು ಸಿನಿಮಾ ಫ್ಲಾಪ್ ಆಗುವ ಲಕ್ಷಣ ಎಂಬುದು ವ್ಯಾಪಾರ ವಿಶ್ಲೇಷಕರ ಮಾತು..
ಇತ್ತ ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾ ಬಾಕ್ಸ್ ಆಫೀಸ್ ಶೇಕ್ ಮಾಡ್ತಿದೆ.. ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಕೇವಲ ತಮಿಳುನಾಡಿನಲ್ಲೇ 20 ಕೋಟಿ ಗಳಿಸಿದೆ.. ತಮಿಳುನಾಡು ಬಿಟ್ಟು ಭಾರತ ಹಾಗೂ ವಿಶ್ವಾದ್ಯಂತ ಸುಮಾರು 45 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಅಂದ್ರೆ ಒಟ್ಟಾರೆ ಸುಮಾರು 65 ಕೋಟಿ ಗಳಿಸಿದೆ.. ಶೀಘ್ರವೇ 100 ಕೋಟಿ ಕ್ಲಬ್ ಸೇರುವುದರಲ್ಲಿ ಅನುಮಾನವೇ ಇಲ್ಲ.
ಪೃಥ್ವಿರಾಜ್
ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ “ಬಚ್ಚನ್ ಪಾಂಡೆ” ನಂತರ ಜೂನ್ 3 ರಂದು ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಅವರ ಮೆಗಾ-ಬಜೆಟ್ ನ ಐತಿಹಾಸಿಕ ಚಿತ್ರ ‘ಸಾಮ್ರಾಟ್ ಪೃಥ್ವಿರಾಜ್’ ಮೂಲಕ ಚಿತ್ರಮಂದಿರಗಳಲ್ಲಿ ಮತ್ತೆ ಅಬ್ಬರಿಸುತ್ತಿದೆ.
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರವು ರಾಜ ಪೃಥ್ವಿರಾಜ್ ಚೌಹಾಣ್ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಕಿಂಗ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಮಾನುಷಿ ಛಿಲ್ಲರ್ ಸಂಯೋಗಿತಾ ಪಾತ್ರವನ್ನು ನಿರ್ವಹಿಸುವ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅಕ್ಷಯ್ ಮತ್ತು ಮಾನುಷಿ ಅವರಲ್ಲದೆ, ಸೋನು ಸೂದ್, ಸಂಜಯ್ ದತ್, ಅಶುತೋಷ್ ರಾಣಾ, ಮಾನವ್ ವಿಜ್, ಸಾಕ್ಷಿ ತನ್ವರ್, ಲಲಿತ್ ತಿವಾರಿ ಸಹ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 300 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಮಲ್ಟಿಸ್ಟಾರರ್ ಚಿತ್ರವು ಮೊದಲ ದಿನವೇ ಒಟ್ಟು 13 ರಿಂದ 15 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ. ಒಂದು ವೇಳೆ ಚಿತ್ರ ಇಷ್ಟೊಂದು ಗಳಿಕೆ ಮಾಡಿದರೆ ನಿರಾಸೆಯಾಗಲಿದೆ. ಇಷ್ಟು ಅದ್ಧೂರಿ ಬಜೆಟ್ ನಲ್ಲಿ ತಯಾರಾದ ಚಿತ್ರ ಕನಿಷ್ಠ 20 ಕೋಟಿ ಓಪನಿಂಗ್ ತೆಗದುಕೊಂಡಿರಬೇಕು.
ವಿಕ್ರಮ್
ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಮಲ್ ಹಾಸನ್ ಆಕ್ಷನ್ ಮೋಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಮಲ್ ಹಾಸನ್ ಹೊರತಾಗಿ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮುಂತಾದ ಅದ್ಭುತ ನಟರು ಕಾಣಿಸಿಕೊಂಡಿದ್ದಾರೆ.. ‘ವಿಕ್ರಮ್’ ಚಿತ್ರ ಹೈಪ್ ನೋಡಿದ್ರೆ ಮೊದಲ ದಿನವೇ ಸಿನಿಮಾ ಭಾರತದಾದ್ಯಂತ ಒಟ್ಟು 40 ರಿಂದ 45 ಕೋಟಿ ರೂಪಾಯಿಗಳ ವ್ಯಾಪಾರ ಮಾಡುವ ನಿರೀಕ್ಷೆಯಿದೆ ..
ಮೇಜರ್
26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ‘ಮೇಜರ್’ ಚಿತ್ರವು ದೇಶದ ನಿಜವಾದ ನಾಯಕನ ಜೀವನದ ಕಥೆಯನ್ನು ಜನರ ಮುಂದೆ ತಂದಿದೆ. ಈ ಚಿತ್ರದ ಮೂಲಕ ನಾವು ಮತ್ತೊಮ್ಮೆ 26/11 ದಾಳಿಯ ಭಯಾನಕ ಚಿತ್ರವನ್ನು ನೋಡುತ್ತೇವೆ. ಮೇಜರ್ ಸಂದೀಪ್ ವೀರ ಎನ್‌ಎಸ್‌ಜಿ ಕಮಾಂಡೋ ಆಗಿದ್ದು, ನಾಗರೀಕರ ಪ್ರಾಣ ಉಳಿಸುವ ವೇಳೆ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದರು. ಅಡಿವಿ ಶೇಷ್, ಸಾಯಿ ಮಂಜ್ರೇಕರ್, ಶೋಭಿತಾ ಧೂಳಿಪಾಲ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರು ನಿರ್ಮಾಣ ಮಾಡಿದ್ದಾರೆ..