ಇತ್ತೀಚೆಗಷ್ಟೇ ಪತಿ ಹಾಗೂ ಮಾವನ ವಿರುದ್ಧವೇ ವಂಚನೆ ಕೇಸ್ ದಾಖಲಿಸಿದ್ದ ನಟಿ ಚೈತ್ರಾ ವಿರುದ್ಧವೇ ಪತಿ ಬಾಲಾಜಿ ಕೂಡ ಸಾಲು ಸಸಾಲು ಆರೋಪಗಳನ್ನ ಹೊರಿಸಿ ಕೇಸ್ ದಾಖಲು ಮಾಡಿದ್ದರು..
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಚೈತ್ರಾ ಹಳ್ಳಿಕೆರೆ ಗುರು ಶಿಷ್ಯ, ಶ್ರೀ ದಾನಮ್ಮ ದೇವಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಚೈತ್ರ ವಿರುದ್ಧ ಆಕೆಯ ಪತಿ ಸಾಲು ಸಾಲು ಆರೋಪಗಳನ್ನ ಹೊರಿಸಿದ್ದಾರೆ. ಮೈಸೂರಿನಲ್ಲಿ ಪತಿಯ ವಿರುದ್ಧ ಚೈತ್ರಾ ಹಳ್ಳಿಕೆರೆ ವಂಚನೆ ಪ್ರಕರಣ ದಾಖಲಿಸಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಪತಿಯ ವಿರುದ್ಧ ಆರೋಪಗಳನ್ನು ಮಾಡಿದ್ದರು.
ಇದೀಗ ನಟಿ ಚೈತ್ರಾ ಪತಿ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ..
ತಮ್ಮ ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಟಿ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಪತಿ ಬಾಲಾಜಿ ಮತ್ತು ಮಾವ ಎಂ.ಕೆ ಪೋತರಾಜು ವಿರುದ್ಧ ದೂರು ದಾಖಲಿಸಿದ್ದರು.
ಅವರ ಮೇಲೆ ಕ್ರಮ ತಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನಟಿ ಚೈತ್ರಾ ಹಳ್ಳಿಕೇರಿ ತಮ್ಮ ಮೇಲೆ ದಾಖಲಿಸಿರುವ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಯನ್ನು ರದ್ದುಗೊಳಿಸುವಂತೆ ಬಾಲಾಜಿ ಮತ್ತು ಅವರ ತಂದೆ ಪೋತರಾಜು ಅವರು ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ವಾದ ಆಲಿಸಿದ ನ್ಯಾಯಮೂರ್ತಿಗಳಾದ ಹೇಮಂತ್ ಚಂದನಗೌಡರ್ ಅವರು ತಡೆಯಾಜ್ಞೆ ನೀಡಿದ್ದಾರೆ. ಈ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಶ್ಯಾಮಸುಂದರ್ ವಾದಿಸಿದ್ದರು.
ಚೈತ್ರಾ ಪತಿ ಬಾಲಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡ್ತಾ , ಮೊದಲು ನಮ್ಮ ಸಂಸಾರ ಚೆನ್ನಾಗಿಯೇ ಇತ್ತು, ಇಬ್ಬರು ಮಕ್ಕಳಾದ ಮೇಲೆ ಚೈತ್ರಾಗೆ ಫ್ರೀಡಂ ಬೇಕು ಎಂದೆನಿಸಲು ಶುರುವಾಯಿತು.
ಮಿಸೆಸ್ ಇಂಡಿಯಾ ಸ್ಪರ್ಧೆಗೂ ರೆಡಿಯಾಗಲು ಪ್ರಾರಂಭಿಸಿದರು. ಫ್ರೀಡಂ ವಿಷಯಕ್ಕೆ ನಮ್ಮಿಬ್ಬರ ನಡುವೆ ಜಗಳಗಳು ನಡೆಯಲು ಆರಂಭವಾಯಿತು. ಆದರೆ ಮಕ್ಕಳ ಕಾರಣಕ್ಕೆ ನಾನು ಎಲ್ಲವನ್ನು ಹಾಗೋ ಹೀಗೋ ಸಹಿಸಿಕೊಂಡು ಹೋದೆ.
ನಮ್ಮಿಬ್ಬರ ನಡುವಿನ ಗಲಾಟೆ ಇತ್ತೀಚಿನದ್ದಲ್ಲ ಹಲವು ವರ್ಷಗಳಿಂದಲೂ ಇದು ನಡೆಯುತ್ತಲೇ ಇದೆ. ನನಗೆ ಪಬ್ಲಿಕ್ ಲೈಫ್ ಬೇಕು ಎಂದು ಗಲಾಟೆ ಮಾಡುತ್ತಿದ್ದರು. ಅವಳಿಗೆ ವ್ಯತಿರಿಕ್ತವಾಗಿ ನಾನು ಮಾತನಾಡಿದರೆ ಮಹಿಳಾಪರ ಕಾನೂನುಗಳು ಬಳಸಿಕೊಂಡು ನನ್ನನ್ನು ಜೈಲಿಗೆ ಅಟ್ಟುವುದಾಗಿ ಬೆದರಿಕೆ ಹಾಕಿದ್ದರು ಎಂದಿದ್ದಾರೆ..
ಫ್ರೀಡಂ ಬೇಕು ಎಂದು ಇರುವ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆ ಮಾಡುವಂತೆ ಮಾಡಿದರು. ಆದರೂ ಅವರಿಗೆ ಸಮಾಧಾನವಾಗಲಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವು. ಈಗಲೂ ಮಕ್ಕಳು ಆಕೆಯ ಬಳಿಯೇ ಇದ್ದಾರೆ. ನನ್ನ ಬಳಿಗೆ ಆಗಾಗ ಬಂದು ಹೋಗುತ್ತಿರುತ್ತಾರೆ. ಇಂಥಹ ಒಳ್ಳೆಯ ಮಕ್ಕಳಿರುವಾಗ ಗಲಾಟೆ ಏಕೆ ಎಂದರೂ ಕೇಳುತ್ತಿಲ್ಲ. ಮಕ್ಕಳ ಈವರೆಗಿನ ಎಲ್ಲ ಜವಾಬ್ದಾರಿಯನ್ನು ನಾನೇ ನೋಡಿಕೊಂಡಿದ್ದೇನೆ ಎಂದಿದ್ದರು..