ಒಂದ್ಕಡೆ KGF 2 ಸಕ್ಸಸ್ ನ ನಂತರ ಸಾಲು ಸಾಲು ಕನ್ನಡ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟುಹಾಕಿವೆ.. ಅದ್ರಲ್ಲೂ 777 ಜಾರ್ಲಿ , ವಿಕ್ರಾಂತ್ ರೋಣ… ಶೂಟಿಂಗ್ ಹಂತದಲ್ಲಿರುವ ಮಾರ್ಟಿನ್ , ಕಾಂತಾರಾ ಸಿನಿಮಾಗಳು ಕೂಡ ಭಾರೀ ನಿರೀಕ್ಷೆ ಹುಟ್ಟಿಸಿವೆ..
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಎಷ್ಟು ಕ್ರೇಜ್ ಹುಟ್ಟುಹಾಕಿದೆಯೋ ಅಷ್ಟೇ ನಿರೀಕ್ಷೆ ರಿಷಬ್ ಶೆಟ್ಟಿ ಅಭಿನಯದ ಕಂಟೆಂಟ್ ಬೇಸ್ಡ್ ಸಿನಿಮಾ ಕಾಂತಾರಾ ಮೇಲಿದೆ..
ಆದ್ರೀಗ ಸಿನಿಮಾಗಳು ರಿಲೀಸ್ ಆಗಲಿರುವ ದಿನಾಂಕಗಳ ಊಹಾಪೋಹಗಳನ್ನ ನೋಡಿದ್ರೆ ಇವೆರೆಡೂ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ನಲ್ಲಿ ಟಕ್ಕರ್ ಏರ್ಪಡಲಿದೆ ಎನ್ನಿಸುತ್ತಿದೆ..
ಹೌದು..! ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಸೆಪ್ಟಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕ ಎ.ಪಿ. ಅರ್ಜುನ್ ಏಪ್ರಿಲ್ 10 ರಂದೇ ಟೀಸರ್ ಮೂಲಕ ಹೇಳಿದ್ದರು.
ಆದ್ರೆ ಅದೇ ದಿನದಂದೇ ಕನ್ನಡದ ಮತ್ತೊಂದು ಸಿನಿಮಾ ಕಾಂತಾರಾ ಕೂಡ ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಸಿನಿಮಾದ ದಿನಾಂಕವನ್ನು ನಿನ್ನೆಯಷ್ಟೇ ನಿರ್ಮಾಪಕ ವಿಜಯ್ ಕಿರಗಂದೂರು ಘೋಷಿಸಿದ್ದು ಇದೀಗ ಬಾಕ್ಸ್ ಆಫೀಸ್ ನಲ್ಲಿ ಭಾರೀ ಫೈಟ್ ನಡೆಯುವ ಲೆಕ್ಕಾಚಾರದ ಚರ್ಚೆ ಜೋರಾಗಿದೆ.
ಕನ್ನಡದ ಈ ಎರೆಡು ಸಿನಿಮಾಗಳಲ್ಲಿ ಪ್ರೇಕ್ಷಕರು ಯಾವ ಸಿನಿಮಾದ ಕೈ ಹಿಡಿಯಲಿದ್ದಾರೆ ಅನ್ನೋದನ್ನ ಮುಂದೆ ಕಾದು ನೋಡ್ಬೇಕಿದೆ ಅಷ್ಟೇ..