ಭಾರತದ ಬಹುನಿರೀಕ್ಷೆಯ ಸಿನಿಮಾ ಕಮಲ್ ಹಾಸನ್ ಅಭಿನಯದ ವಿಕ್ರಮ್ ಇಂದು ಭಾರತದಾದ್ಯಂತ ರಿಲೀಸ್ ಆಗಿದೆ.. ಇದೇ ಸಿನಿಮಾ ಎದುರಿಗೆ ಮತ್ತೆರೆಡು ಸ್ಟಾರ್ ಸಿನಿಮಾಗಳಾದ ಮೇಜರ್ , ಪೃಥ್ವಿರಾಜ್ ಸಹ ರಿಲೀಸ್ ಆಗಿದೆ.. ಆದ್ರೆ ಬಾಕ್ಸ್ ಆಫೀಸ್ ನಲ್ಲಿ ವಿಕ್ರಮ್ ಅಬ್ಬರಿಸಿದೆ.. ಸುಮಾರು 665 ಕೋಟಿ ರೂಪಾಯಿ ಭಾರತದಲ್ಲಿಯೇ 2 ದಿನಗಳಲ್ಲಿ ಕಲೆಕ್ಷನ್ ಆಗಿದೆ..
ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಕಮಲ್ ಸಂದರ್ಶನವೊಂದರಲ್ಲಿ ಇಂಡಿಯನ್ 2 ಸಿನಿಮಾ ಬಗ್ಗೆ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ.
ಇಂಡಿಯನ್ 2 ಸಿನಿಮಾ ನಿಂತಿಲ್ಲ. ಖಂಡಿತಾ ಪ್ರೇಕ್ಷಕರ ಮುಂದೆ ತರುತ್ತೇನೆ. ಅನೇಕ ಕಾರಣಗಳಿಂದ ಸಿನಿಮಾ ಚಿತ್ರೀಕರಣಕ್ಕೆ ತೊಂದರೆಯಾಗುತ್ತಿದೆ. ಆದರೂ ಶೂಟಿಂಗ್ ಮುಂದುವರೆಸುತ್ತೇವೆ.
ಈಗಾಗಲೇ ಈ ಚಿತ್ರದ ನಿರ್ಮಾಣ ಸಂಸ್ಥೆ ಲೈಕಾ ಜತೆ ಮಾತುಕತೆ ನಡೆಸಿದ್ದೇವೆ. ಇನ್ನು ಶೇಕಡ 40ರಷ್ಟು ಚಿತ್ರೀಕರಣ ಬಾಕಿ ಇದೆ.
ಅದನ್ನು ಕೂಡ ಶೀಘ್ರದಲ್ಲೇ ಮಾಡುತ್ತೇವೆ. ಏಕೆಂದರೆ ಹತ್ತು ವರ್ಷಗಳ ಕಾಲ ಒಂದೇ ಚಿತ್ರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.