KGF 2 ಸಿನಿಮಾ ಮೂಲಕ ವಿಶ್ವಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ಪರಿಚಯಿಸಿದ ಪ್ರಶಾಂತ್ ನೀಲ್ ಪ್ರಸ್ತುತ ಟಾಲಿವುಡ್ ನಲ್ಲಿ ಬ್ಯಸುಇಯಾಗಿದ್ದಾರೆ.. ಸಲಾರ್ ನಲ್ಲಿ ಪ್ರಭಾಸ್ ಗೆ ಆಕ್ಷನ್ ಕಟ್ ಹೇಳ್ತಿರುವ ಅವರು ಮುಂದೆ ಜ್ಯೂ. NTR ಗೆ ಸಿನಿಮಾ ಮಾಡೋ ವಿಚಾರ ಗೊತ್ತೇ ಇದೆ..
ಇತ್ತೀಚೆಗೆ NTR ಬರ್ತ್ ಡೇ ಪ್ರಯುಕ್ತ ಆ ಸಿನಿಮಾದ ಪೋಸ್ಟರ್ ಸಹಹ ರಿಲೀಸ್ ಆಗಿದ್ದು , ಸಖತ್ ಡೆಡ್ಲಿಯಾಗಿ NTR ಕಾಣಿಸಿಕೊಂಡಿದ್ದರು.. NTR31 ಎಂದು ಕರೆಯಲ್ಪಡ್ತಿದದ್ದ ಈ ಸಿನಿಮಾದ ಟೈಟಲ್ ಈಗ ರಿವೀಲ್ ಆಗಿದೆ.. ಎಲ್ಲರ ಅಚ್ಚರಿಗೂ ಕಾರಣವಾಗಿದೆ..
ಹೌದು..! ಎಲ್ರಿಗೂ ಗೊತ್ತೇ ಇರೋ ಹಾಗೆ ‘ಜೈ ಲವ ಕುಶ’ ಸಿನಿಮಾದ ‘ಅಸುರ ಅಸುರ ಅಸುರ ಅಸುರ .. ರಾವಣಾಸುರ ..’ ಹಾಡು ಸೂಪರ್ ಹಿಟ್ ಆಗಿತ್ತು. ಇದೇ ಅಸುರ ಟೈಟಲ್ ಈ ಸಿನಿಮಾಗೆ ಫಿಕ್ಸ್ ಆಗಿದೆ.. ಅಂದ್ಹಾಗೆ ಆಶ್ಚರ್ಯ ಯಾಕಂದ್ರೆ ಈ ಅಸುರ ಟೈಟಲ್ ಸುಮಾರು ವರ್ಷಗಳ ಹಿಂದೆ ಬಂದ ಶಿವರಾಜ್ ಕುಮಾರ್ ನಟನೆಯ ಸಿನಿಮಾ ಅಸುರಗೂ ಇತ್ತು..
ತಮಿಳಿನಲ್ಲಿ ಧನುಷ್ ಅಸುರನ್ ಸಿನಿಮಾವಿದೆ.. ಎಷ್ಟೋ ಜನರು ಇದೇ ಸಿನಿಮಾದ ರೀಮೇಕಾ ಅಂತಲೂ ಕನ್ಫ್ಯೂಸ್ ಆಗಿದ್ದು ಇದು ರೀಮೇಕ್ ಅಲ್ಲ ಅನ್ನೋದನ್ನ ಈಗಾಲೇ ಸ್ಪಷ್ಟಪಡಿಸಲಾಗಿದೆ..
ಮೇ 20 ರಂದು ಜ್ಯೂನಿಯರ್ ಎನ್ ಟಿಆರ್ ಬರ್ತ್ ಡೇ ಅಂಗವಾಗಿ ಎರಡು ಸಿನಿಮಾಗಳನ್ನು ಅನೌನ್ಸ್ ಮಾಡಲಾಗಿದೆ.
ಇದರಲ್ಲಿ ಒಂದು ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ.
ಮತ್ತೊಂದನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ.
ಮೊದಲು ಕೊರಟಾಲ ಶಿವ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ.
ಇದಾದ ಬಳಿಕ ಮುಂದಿನ ವರ್ಷ ಏಪ್ರಿಲ್ ನಿಂದ ಎನ್ ಟಿಆರ್-ಪ್ರಶಾಂತ್ ಸಿನಿಮಾ ಸೆಟ್ಟೇರಲಿದೆ ಎಂದು ಟಾಕ್.
ಈ ಚಿತ್ರಕ್ಕೆ ‘ಅಸುರ’ ಅಥವಾ ‘ಅಸುರುಡು’ ಎಂಬ ಟೈಟಲ್ ಫಿಕ್ಸ್ ಮಾಡಲು ಚಿತ್ರತಂಡ ಮುಂದಾಗಿದೆ.
ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದರೂ, ಟಾಲಿವುಡ್ ನಲ್ಲಿ ಈ ಟೈಟಲ್ ಭಾರಿ ಸದ್ದು ಮಾಡುತ್ತಿದೆ.