ರಂಭಾ…..!!! ಗ್ಲಾಮರಸ್ ಗೊಂಬೆ,,,,, ಒಂದು ಕಾಲದಲ್ಲಿ ಕನ್ನಡ ,ಮಲಯಾಳಂ , ತೆಲುಗು, ತಮಿಳು , ಹಿಂದಿ ಭೋಜಜ್ ಪುರಿ ಹೀಗೆ ಅನೇಕ ಭಾಷೆಗಳಲ್ಲೂ ಬಹುಬೇಡಿಕೆಯ ನಟಿಯಾಗಿ ಮಿಂಚಿ ಮೆರೆದು ಈಗ ಸಿನಿಮಾರಂಗದಿಂದ ಅಂತರ ಕಾಯ್ದುಉಕೊಂಡಿದ್ದಾರೆ..
ಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚು ಮಿಂಚಿದ ರಂಭಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ರಂಭಾ 46 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಸರ್ವರ್ ಸೊಮಣ್ಣ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದರು.. ನಂತರ ಕೆಂಪಯ್ಯ IAS , ಓ ಪ್ರೇಮವೇ , ಪಾಂಚಾಲಿ , ಸಾಹಕಾರ , ಭಾವ ಬಾಮೈದ , ಪಾಂಡುರಂಗ ವಿಠಲ , ಗಂಡುಗಲಿ ಕುಮಾರರಾಮ , ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡಿದ್ದಾರೆ..
, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ , ಜಗ್ಗೇಶ್ , ದರ್ಶನ್ ರಂತಹ ಸ್ಟಾರ್ ನಟರೊಂದಿಗೆ ತೆಎರೆ ಹಂಚಿಕೊಂಡಿದ್ದರು.. ಸದ್ಯಕ್ಕೆ ರಂಭಾ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡು ವರ್ಷಗಳೇ ಉರುಳಿದೆ..
ಇವರು 2010ರಲ್ಲಿ ಇಂದ್ರ ಕುಮಾರ್ ಪದ್ಮನಾಭನ್ ಎಂಬುವವರನ್ನು ವಿವಾಹವಾಗಿದ್ದರು.. ಆ ನಂತರದಿಂದ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಅಂದ್ಹಾಗೆ ರಂಭಾ ಮೂಲತಃ ಆಂಧ್ರ ಪ್ರದೇಶದ ವಿಜಯವಾಡವರು. ತೆಲುಗು ಕುಟುಂಬದಲ್ಲಿ ಜನಿಸಿದವರು.. ನಿಜವಾದ ಹೆಸರು ವಿಜಯಲಕ್ಷ್ಮಿ. ಸಿನಿಮಾರಂಗಕ್ಕೆ ಬಂದ ನಂತರ ರಂಭಾ ಎಂದು ಹೆಸರು ಬದಲಾಯಿಸಿಕೊಂಡು ರಂಭಾ ಎಂದೇ ಫೇಮಸ್ ಆದವರು.
ರಂಭಾ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗ ಶಾಲೆಯ ಕಾರ್ಯಕ್ರಮವೊಂದರಲ್ಲಿ ಪಾತ್ರವೊಂದನ್ನ ಮಾಡಿದ್ದಾಗ ಮಲಯಾಳಂ ನಿರ್ದೇಶಕ ಹರಿಹರನ್ ಅವರ ಕಣ್ಣಿಗೆ ಕಾಣಿಸಿಕೊಂಡಿದ್ದರು.. ಆಗ ಸರ್ಗಂ ಎಂಬ ಸಿನಿಮಾದಲ್ಲಿ ರಂಭಾಗೆ ಅವಕಾಶ ನೀಡಿದ್ದರು. ಸಿನಿಮಾಗೆ ಕಾಲಿಟ್ಟ ಬಳಿಕ ಅಮೃತಾ ಎಂದು ಹೆಸರು ಬದಲಿಸಿಕೊಂಡಿದ್ದರು. ಆ ಬಳಿಕ ಮತ್ತೆ ರಂಭಾ ಎಂದು ಹೆಸರು ಬದಲಿಸಿಕೊಂಡಿದ್ದರು.
ಇದಾದ ನಂತರ ರಂಭಾಗೆ ಸಾಲು ಸಾಲು ಅವಕಾಶಗಳು ಬರತೊಡಗಿದ್ದವು.. ಹೀಗಾಗಿ ರಂಬಾ ತಮ್ಮ 15 ನೇ ವಯಸ್ಸಿಗೆ ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿ ಸಂಪೂರ್ಣವಾಗಿ ಸಿನಿಮಾರಂಗದಲ್ಲೇ ತಮ್ಮನ್ನ ತಾವು ತೊಡಗಿಸಿಕೊಂಡರು..