ಇತ್ತೀಚೆಗೆ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ , ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರ ಅಭಿನಯದ ಐತಿಹಾಸಿಕ ಸಿನಿಮಾ ಸಿನಿಮಾ ಸಾಮ್ರಾಟ್ ಪೃಥ್ವಿರಾಜ್ ವೀಕ್ಷಿಸಿದ ಬಳಿಕ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಿನಿಮಾವನ್ನ ಮೆಚ್ಚಿಕೊಂಡಿದ್ದರು.. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ತೆರಿಗೆ ವಿನಾಯ್ತಿ ಘೋಷಿಸಿದ್ದರು… ಈಗ RSS ನ ರಾಷ್ಟ್ರೀಯ ಅಧ್ಯಕ್ಷರಾದ ಮೋಹನ್ ಭಾಗವತ್ ಅವರು ಸಿನಿಮಾ ವೀಕ್ಷಿಸಿ ಸಿನಿಮಾವನ್ನ ನೋಡುವಂತೆ ಕೋರಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಶುಕ್ರವಾರ ದೆಹಲಿಯಲ್ಲಿ ಅಕ್ಷಯ್ ಕುಮಾರ್ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ವೀಕ್ಷಿಸಿದರು. ಸಿನಿಮಾ ನೋಡಿದ ನಂತರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಸತ್ಯಗಳನ್ನು ಆಧರಿಸಿದ ಚಿತ್ರ. ಅದು ನೀಡುವ ಸಂದೇಶ ಇಂದು ದೇಶಕ್ಕೆ ಬೇಕಾಗಿದೆ. ಇಲ್ಲಿಯವರೆಗೆ ನಾವು ಇತರರು ಬರೆದ ಇತಿಹಾಸವನ್ನು ಓದುತ್ತಿದ್ದೆವು. ಈಗ ನಾವು ನಮ್ಮ ಇತಿಹಾಸವನ್ನು ಭಾರತೀಯ ದೃಷ್ಟಿಕೋನದಿಂದ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮುಂದುವರೆದು ಹೇಳಿದ ಭಾಗವತ್ , ಪೃಥ್ವಿರಾಜ್ ಚೌಹಾಣ್, ಮೊಹಮ್ಮದ್ ಘೋರಿ ಬಗ್ಗೆ ನಾವು ಮೊದಲೇ ಓದಿದ್ದೇವೆ, ಆದರೆ ಇದನ್ನೆಲ್ಲ ಬೇರೆಯವರು ಬರೆದಿದ್ದಾರೆ. ಇಂದು ನಾವು ಮೊದಲ ಬಾರಿಗೆ ಭಾರತದಲ್ಲಿ ಬರೆಯಲ್ಪಟ್ಟಿರುವ ಚಿತ್ರವನ್ನ ನೋಡುತ್ತಿದ್ದೇವೆ. ನಾವು ನಮ್ಮ ಇತಿಹಾಸವನ್ನು ನಮ್ಮ ಕಣ್ಣುಗಳಿಂದ ಅರ್ಥಮಾಡಿಕೊಳ್ಳುತ್ತೇವೆ. ಇದನ್ನು ಅರ್ಥ ಮಾಡಿಕೊಳ್ಳುವ ಅವಕಾಶ ದೇಶವಾಸಿಗಳಿಗೆ ಸಿಕ್ಕರೆ ಖಂಡಿತಾ ಅದರ ಫಲಿತಾಂಶ ದೇಶದ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ಈ ಚಿತ್ರದಲ್ಲಿ ಪರಾಕ್ರಮಿಗಳನ್ನು ಹೇಗೆ ತೋರಿಸಲಾಗಿದೆಯೋ ಅದೇ ರೀತಿ ಭಾರತದ ಗೌರವವನ್ನು ಕಾಪಾಡುವಲ್ಲಿ ಭಾರತದ ಜನರು ಒಗ್ಗಟ್ಟಿನಿಂದ ಇರುತ್ತಾರೆ ಎಂದು ಹೇಳಿದ್ದಾರೆ.
ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಸಂಜೆ ನವದೆಹಲಿಯಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚಿತ್ರವನ್ನು ವೀಕ್ಷಿಸಿದರು. ಅಮಿತ್ ಶಾ ಚಿತ್ರ ಮತ್ತು ಚಿತ್ರತಂಡವನ್ನು ಸಾಕಷ್ಟು ಹೊಗಳಿದ್ದರು. “ಭಾರತದ ಸಾಂಸ್ಕೃತಿಕ ಯುದ್ಧಗಳನ್ನು ಬಿಂಬಿಸುವ ಈ ಚಿತ್ರವನ್ನು ಇತಿಹಾಸದ ವಿದ್ಯಾರ್ಥಿಯಾಗಿ ಆನಂದಿಸಿದೆ ಎಂದು ಸಿನಿಮಾ ಮುಗಿದ ಬಳಿಕ ಹೇಳಿದರು. 13 ವರ್ಷಗಳ ನಂತರ ಅವರು ತಮ್ಮ ಕುಟುಂಬದೊಂದಿಗೆ ಥಿಯೇಟರ್ನಲ್ಲಿ ಚಿತ್ರ ವೀಕ್ಷಿಸುತ್ತಿದ್ದಾರೆ.
ಕ್ಯಾಬಿನೆಟ್ ಜೊತೆ ಚಿತ್ರ ವಿಕ್ಷಿಸಿದ ಯೋಗಿ ಅದಿತ್ಯನಾಥ್
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಕ್ಯಾಬಿನೆಟ್ ಸಚಿವರೊಂದಿಗೆ ಗುರುವಾರ ಸಾಮ್ರಾಟ್ ಪೃಥ್ವಿರಾಜ್ ಚಿತ್ರವನ್ನು ವೀಕ್ಷಿಸಿದರು. ಈ ಚಿತ್ರದ ವಿಶೇಷ ಪ್ರದರ್ಶನವನ್ನು ಲಕ್ನೋದ ಲೋಕಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಿತ್ರವನ್ನು ವೀಕ್ಷಿಸಿದ ನಂತರ, ಯೋಗಿ ಆದಿತ್ಯನಾಥ್ ಅವರು ಯುಪಿಯಲ್ಲಿ ಟ್ಯಾಕ್ಸ್ ಫ್ರೀ ಮಾಡುವುದಾಗಿ ಘೋಷಿಸಿದರು.