ಭಾರತದ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ವಿಕ್ರಾಂತ್ ರೋಣ , ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡ್ತಿದ್ದು ಸುಮಾರು 8 ಕ್ಕೂ ಅಧಿಕ ಭಾಷೆಗಳಲ್ಲಿ ರಿಲೀಸ್ ಆಗ್ತಿದೆ.. ಈ ಸಿನಿಮಾದ ರಾರಾ ರಕ್ಕಮ್ಮ ಹಾಡು ಇತ್ತೀಚೆಗೆ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡಿದೆ.. ಅಂದ್ಹಾಗೆ ಹಾಡಿನಲ್ಲಿ ಕಿಚ್ಚ ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗೆ ಮಸ್ತ್ ಸ್ಟೆಪ್ಸ್ ಹಾಕಿದ್ದು ಕಿಚ್ಚನ ಫ್ಯಾನ್ಸ್ ಫಿದಾ ಆಗಿಬಿಟ್ಟಿದ್ದಾರೆ..
ಅದೂ ಅಲ್ದೇ ಸೆಲೆಬ್ರಿಟಿಗಳು , ಸೋಷಿಯಲ್ ಮೀಡಿಯಾ ಸ್ಟಾರ್ ಗಳೂ ಸಹ ಈ ಹಾಡಿಗೆ ಸ್ಟೆಪ್ಸ್ ಹಾಕಿದ್ದು ವಿಡಿಯೋಗಳು ವೈರಲ್ ಆಗ್ತಿವೆ.. ಆದ್ರೀಗ ಇದೇ ಹಾಡಿಗೆ 250ಕ್ಕೂ ಹೆಚ್ಚು ನುರಿತ ನೃತ್ಯ ಕಲಾವಿದರು ನಾಳೆ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ. ಈ ಮೂಲಕ ದಾಖಲೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಇದು ವಿಭಿನ್ನ ರೀತಿಯ ಸಿನಿಮಾದ ಪ್ರಚಾರವೂ ಆಗಿದೆ..
ನಾಳೆ ಬೆಳ್ಳಂಬೆಳಗ್ಗೆ ನೃತ್ಯ ಕಲಾವಿದರು ಹೆಜ್ಜೆ ಹಾಕಲಿದ್ದು, ಅಭಿಮಾನಿಗಳು ಕೂಡ ಇದರಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗ್ತಿದೆ..