ಬಹುಕಾಲದ ಗೆಳಯ ವಿಗ್ನೇಶ್ ಶಿವನ್ ಜೊತೆ ದಕ್ಷಿಣದ ಖ್ಯಾತ ನಟಿ ನಯನತಾರ ಇಂದು ವಿವಾಹವಾಗಿದ್ದಾರೆ. ಶಾರುಖ್ ಖಾನ್, ರಜನಿಕಾಂತ್ ಸೇರಿದಂತೆ ಗಣ್ಯಾತಿಗಣ್ಯರು ಮದುವೆ ಸಂಭ್ರಮದಲ್ಲಿ ಹಾಜರಾಗಿದ್ದಾರೆ.
ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿರುವ ರೆಸಾರ್ಟ್‌ನಲ್ಲಿ ಮದುವೆ ನಡೆಯಲಿದೆ. ಜೂನ್ 10ರಂದು ಇಲ್ಲೇ ಆರತಕ್ಷತೆಯನ್ನೂ ಏರ್ಪಡಿಸಲಾಗಿದೆ. ದಕ್ಷಿಣದ ಚಿತ್ರರಂಗ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರು ಈ ಆರತಕ್ಷತೆಯಲ್ಲಿ ಭಾಗವಹಿಸಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಹೊರತುಪಡಿಸಿ, ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಸೂರ್ಯ, ಕಾರ್ತಿ, ವಿಜಯ್ ಸೇತುಪತಿ ಮತ್ತು ಸಮಂತಾ ರುತ್ ಪ್ರಭು ಸೇರಿದಂತೆ ಅನೇಕ ಗಣ್ಯರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಮದುವೆಯಲ್ಲಿ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅತಿಥಿಗಳಿಗೆ ವಿಶೇಷ ಕೋಡ್ ಕೂಡ ನೀಡಲಾಗಿದೆ.
ನಯನತಾರಾ ನವೆಂಬರ್ 18, 1984 ರಂದು ಬೆಂಗಳೂರಿನ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್. ಅಲ್ಲದೆ .. ನಿರ್ದೇಶಕ ವಿಘ್ನೇಶ್ ಶಿವನ್ ಅವರು 18 ಸೆಪ್ಟೆಂಬರ್ 1985 ರಂದು ತಮಿಳುನಾಡಿನ ಹಿಂದೂ ಕುಟುಂಬದಲ್ಲಿ ಜನಿಸಿದರು. ನಯನತಾರಾಗೆ ಸದ್ಯ 37 ವರ್ಷ.ವಿಘ್ನೇಶ್ ಗೆ 36 ವರ್ಷ. ಇವರಿಬ್ಬರೂ ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ.