ಕನ್ನಡದ ಯೂ ಟರ್ನ್ ಸಿನಿಮಾ ಮೂಲಕ ಫೇಮಸ್ ಆಗಿ ನಂತರ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡು ಪರಭಾಷೆಗಳಲ್ಲಿ ಮಿಂಚುತ್ತಾ ಬಾಲಿವುಡ್ ನಲ್ಲೂ ಬ್ಯುಸಿಯಾಗಿರೋ ನಟಿ ಶ್ರದ್ಧಾ ಶ್ರೀನಾಥ್ ಇದ್ದಕ್ಕಿದ್ದ ಹಾಗೆ ಅಭಿಮಾನಿಗಳಿಗೆ ಆಘಾತವೊಂದನ್ನ ನೀಡಿ ತಲೆಗೆ ಹುಳ ಬಿಟ್ಟಿದ್ದಾರೆ..
ಟ್ವಿಟ್ಟರ್ ನಲ್ಲಿ ರಾತ್ರಿ ಗುಡ್ ಬೈ ಎಂದು ಪೋಸ್ಟ್ ಹಾಕಿ ಅಭಿಮಾನಿಗಳಲ್ಲಿ ಗೊಂದಲ ಹುಟ್ಟುಹಾಕಿದ್ಧಾರೆ.. ಆದ್ರೆ ಯಾವ ಕಾರಣಕ್ಕೆ ಈ ಪೋಸ್ಟ್ ಹಾಕಿದ್ದಾರೆ.. ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದ್ರಾ ಅಥವ , ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ್ರಾ ಅನ್ನೋ ಗೊಂದಲ , ಚರ್ಚೆ ಶುರುವಾಗಿದೆ..
ತೆಲುಗು, ತಮಿಳು, ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.
Hello goodbye pic.twitter.com/Rbc8LAW7mi
— Shraddha Srinath (@ShraddhaSrinath) June 8, 2022