ರಾಜಕುಮಾರ , KGF , KGF 2 ನಂತಹ ಬಿಗ್ ಹಿಟ್ ಸಿನಿಮಾಗಳನ್ನ ನೀಡಿ ಒನ್ ಆಫ್ ದ ಟಾಪ್ ಸಿನಿಮಾ ಪ್ರೊಡಕ್ಷನ್ ಕಂಪನಿಯಾಗಿ ಹೊರಹೊಮ್ಮಿರುವ ಹೊಂಬಾಳೆ ಫಿಲಮ್ಸ್ ,,, ನ ಬ್ಯಾನರ್ ನಡಿ ಮುಂದೆ ಪ್ರಭಾಸ್ ಅಭಿನಯದ ಸಲಾರ್ , ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ , ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾಗಳು ರಿಲೀಸ್ ಆಗಲಿದೆ..
ಹೀಗೆ ಸಾಲು ಸಾಲು ಸಿನಿಮಾಗಳನ್ನ ತೆಗೆಯುತ್ತಿರುವ ಹೊಂಬಾಳೆ ಸಿನಿಮಾ ಇದೀಗ ದೊಡ್ಡ ಸರ್ಪ್ರೈಸ್ ಒಂದನ್ನ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಫೈಯರ್ ಹೆಚ್ಚಿಸಿದೆ..
ಇದೀಗ ಹೊಂಬಾಳೆ ಫಿಲಮ್ಸ್ ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಸಿನಿಮಾ ಅನೌನ್ಸ್ ಮಾಡುವ ಮೂಲಕ ಇಡೀ ಸೌತ್ ಇಂಡಸ್ಟ್ರಿ ಅಷ್ಟೇ ಅಲ್ಲ ಬಾಲಿವುಡ್ ವನಲ್ಲಿ ಅಚ್ಚರಿ ಮೂಡಿಸಿದೆ..
ಹೌದು,, ಪೃಥ್ವಿರಾ್ ವಿಭಿನ್ನ ಪಾತ್ರಗಳಿಗೆ ಹೆಸರಾಂತರು.. ಈಗಾಗಲೇ ಕನ್ನಡ , ತೆಲುಗಿನಲ್ಲಿ ಸಿನಿಮಾಗಳನ್ನ ಮಾಡ್ತಿರುವ ಹೊಂಬಾಳೆ ಮುಂದೆ ತಮಿಳಿನ ಸೂರರೈ ಪೊಟ್ರು ನಿರ್ದೇಶಕಿ ಜೊತೆಗೆ ಸಿನಿಮಾ ಮಾಡುವ ಮೂಲಕ ತಮಿಳು ಸಿನಿಮಾರಂಗವನ್ನೂ ಪ್ರವೇಶ ಮಾಡಿದ್ದು , ಮುಂದೆ ಮಾಲಿವುಡ್ ನಲ್ಲೂ ಛಾಪು ಮೂಡಿಸಲು ಹೊರಟಿದೆ..
ಅಂದ್ಹಾಗೆ #Tyson ಸಿನಿಮಾದ ಟೈಟಲ್ ಇಡಲಾಗಿದೆ.. ಸಿನಿಮಾದ ಪೋಸ್ಟರ್ ಬಹಳ ವಿಭಿನ್ನವಾಗಿದ್ದು , ಮಲಯಾಳಂ ಜೊತೆಗೆ ಇಡೀ ಸೌತ್ ಸಿನಿಮಾ ಪ್ರೇಮಿಗಳನ್ನ ಸೆಳೆಯುವಲ್ಲಿ ಹೊಂಬಾಳೆ ಯಶಸ್ವಿಯಾಗಿದೆ..
ಇಂದು ಬೆಳಿಗ್ಗೆ ಹೊಂಬಾಳೆ ಟ್ವೀಟ್ ಮಾಡಿ 5.25ಕ್ಕೆ ಬಿಗ್ ಸರ್ಪ್ರೈಸ್ ನೀಡೋದಾಗಿ ತಿಳಿಸಿದ ನಂತರ , ಈ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿತ್ತು.. ಯಶ್ ಜೊತೆಗೆ ಹೊಸ ಸಿನಿಮಾ ಮಾಡಬಹುದಾ..?? ಹೊಸ ಸಿನಿಮಾ ಅನೌನ್ಸ್ ಮಾಡಬಹುದಾ… ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಅಪ್ ಡೇಟ್ ಏನಾದ್ರೂ ಸಿಗಬಹುದಾ ಎಂದು ಎದುರು ನೋಡ್ತಿದ್ದವರಿಗೆ ಕೊನೆಗೂ ಉತ್ತರ ಸಿಕ್ಕಿದ್ದು,,, ಎಲ್ಲರೂ ಎಕ್ಸೈಟ್ ಆಗಿದ್ದಾರೆ..
Happy to announce our next venture #Tyson with @PrithviOfficial.
Get ready to be astonished by our brave defender. Time to unshackle the chains and resuscitate the system!@VKiragandur @hombalefilms #MuraliGopy@TysonOffl @HombaleGroup #HombaleFilms pic.twitter.com/VO7g2chMi4
— Hombale Films (@hombalefilms) June 10, 2022