ನಟಿ ಕಾವ್ಯ ಶಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ಮಾಪಕ ವರುಣ್..!!
ಸ್ಯಾಂಡಲ್ವುಡ್ ನಟಿ ಕಾವ್ಯ ಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಗುರುಹಿರಿಯರ ಸಮ್ಮುಖದಲ್ಲಿ ಕಾವ್ಯ ಶಾ ಮತ್ತು ವರುಣ್ ಸಪ್ತಪದಿ ತುಳಿದಿದ್ದಾರೆ. ಭಾವಿ ಪತಿ ತಂದೆಯ ಅಕಾಲಿಕ ಮರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಈ ಜೋಡಿ ಹಸೆಮಣೆ ಏರಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ ಕಾವ್ಯ ಶಾ ಮತ್ತು ಸ್ಯಾಂಡಲ್ವುಡ್ ನಿರ್ಮಾಪಕ ವರುಣ್ ಮದುವೆ ಸಂಭ್ರಮಕ್ಕೆ ತಾರ ಜೋಡಿಗಳ ಆಗಮನದಿಂದ ಕಳೆಗಟ್ಟಿತ್ತು. ಬೆಂಗಳೂರಿನ ನಂದಿ ಗ್ರೌಂಡ್ಸ್ನಲ್ಲಿ ಆಪ್ತರ ಸಮ್ಮುಖದಲ್ಲಿ ಜೂನ್ 9 ರಂದು ಅಂದರೆ ನಿನ್ನೆ ಸರಳವಾಗಿ ಮದುವೆ ಆಗಿದ್ದಾರೆ.
ಈ ಜೋಡಿ ಶುಭಹಾರೈಸಲು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕೂಡ ಆಗಮಿಸಿದ್ದರು. ಲೂಸ್ ಮಾದ ಯೋಗಿ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಬಂದು ಶುಭ ಹಾರೈಸಿದ್ದಾರೆ. ವರುಣ್ ಮತ್ತು ರಮ್ಯಾ ಸಾಕಷ್ಟು ವರ್ಷಗಳಿಂದ ಪರಿಚಿಯವಿದ್ದು, ಸ್ನೇಹಿತನ ಮದುವೆಗೆ ಬಂದು ರಮ್ಯಾ ಶುಭ ಹಾರೈಸಿದ್ದರೆ.