ರಕ್ಷಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲಾ ಭಾಷೆಗಳಲ್ಲೂ ಧೂಳೆಬ್ಬಿಸುತ್ತಿದೆ.. ಹಾಸ್ಯದ ಜೊತೆಗೆ ಭಾವನೆಗಳ ಬೆಸೆಯುವ ಅಳಿಸುವ , ನಗಿಸುವ ಭಾವಾಂತರಂಗದಲ್ಲಿ ತೇಲಿಸುವ ಸಿನಿಮಾವಿದು..
ಈ ಸಿನಿಮಾದ ನಂತರ ಜನರು ಚಾರ್ಲಿಗೆ ಪಾತ್ರ ನಿಭಾಯಿಸುವ ನಾಯಿಗೆ ಫ್ಯಾನ್ಸ್ ಆಗಿಬಿಟ್ಟಿದ್ಧಾರೆ.. ಇದೀಗ ಮಂಗಳೂರಿನ ಶ್ವಾನಕ್ಕೆ ಪೊಲೀಸ್ ಇಲಾಖೆ ‘ಚಾರ್ಲಿ’ ಎಂದು ಹೆಸರಿಟ್ಟಿದೆ.. ಹೌದು..! ಮಂಗಳೂರು ಪೊಲೀಸ್ ಇಲಾಖೆಯು ಚಾರ್ಲಿ 777 ಸಿನಿಮಾದಿಂದ ಸ್ಫೂರ್ತಿ ಪಡೆದು ತಮ್ಮ ಶ್ವಾನ ದಳದ ಮರಿನಾಯಿಗೆ ಚಾರ್ಲಿ ಎಂದು ಹೆಸರಿಟ್ಟಿದ್ದಾರೆ. ನಾಯಿಮರಿಗೆ ಇನ್ನೂ ಮೂರು ತಿಂಗಳಾಗಿದ್ದರಿಂದ ಚಾರ್ಲಿ ಎಂದು ಹೆಸರಿಡುವ ಮೂಲಕ ಸಂಭ್ರಮಿಸಿದ್ದಾರೆ. ಇದಕ್ಕೆ ಕಾರಣ ಚಾರ್ಲಿ ಸಿನಿಮಾ ಎಂದು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿ ಕಚೇರಿಯಲ್ಲೇ ಕೇಕ್ ತಂದು, ನಾಯಿಗೆ ಹೆಸರಿಟ್ಟು ಜೂನ್.9ರಂದು ನಾಮಕರಣ ಶಾಸ್ತ್ರ ಮುಗಿಸಿದ್ದಾರೆ. ಈ ನಾಯಿಮರಿಯು ಲ್ಯಾಬ್ರಡರ್ ತಳಿಯಾಗಿದ್ದು, ಬಂಟ್ವಾಳದಿಂದ ಇಪ್ಪತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಲಾಗಿದೆ ಎನ್ನಲಾಗಿದೆ.
ಅಂದಹಾಗೆ ಈ ನಾಯಿ ಮರಿ ಹುಟ್ಟಿದ್ದು 16 ಮಾರ್ಚ್ 2022ರಂದು, ಮೂರ್ನಾಲ್ಕು ತಿಂಗಳ ಬಳಿಕೆ ಈ ನಾಯಿಮರಿ ಬೆಂಗಳೂರಿನಲ್ಲಿ ತರಬೇತಿಗಾಗಿ ಬರಲಿದೆ ಎನ್ನಲಾಗಿದೆ. ಆನಂತರ ಅದನ್ನು ಬಾಂಬ್ ನಿಷ್ಕ್ರೀಯ ಕೆಲಸಕ್ಕೆ ನಿಯೋಜನೆ ಮಾಡಲಾಗುವುದಾಗಿ ಮಾಹಿತಿ ಸಿಕ್ಕಿದೆ..