ಬಾಲಿವುಡ್ ಗ್ರಹಚಾರ ಸರಿಹೋಗಿಲ್ಲ , ಪ್ರೇಕ್ಷಕರಿಲ್ಲದೇ ಅಕ್ಷಯ್ ಸಿನಿಮಾ ಕ್ಯಾನ್ಸಲ್..!!!
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷರ್ ಕುಮಾರ್, ಮಾಜಿ ಮಿಸ್ ಯೂನಿವರ್ಸ್ ಮಾನುಷಿ ಚಿಲ್ಲರ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಿನಿಮಾ ಪೃಥ್ವಿರಾಜ್.
ಡೆಲ್ಲಿಯನ್ನು ಆಳಿದ ಪೃಥ್ವಿರಾಜ್ ಚೌಹಾನ್ ಜೀವನ ಚರಿತ್ರೆಯ ಆಧಾರವಾಗಿಟ್ಟುಕೊಂಡು ತೆಗೆಯಲಾಗಿದೆ. ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್ ಬಳಿ ಮಕಾಡೆ ಮಲಗಿದೆ.
ಥಿಯೇಟರ್ ನಲ್ಲಿ ಪ್ರೇಕ್ಷಕರಿಲ್ಲದೇ ಮೂವಿ ಪ್ರದರ್ಶನವನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಸಿನಿಮಾವನ್ನು ಯಶ್ ರಾಜ್ ಫಿಲಂ ನಿರ್ಮಿಸಿದೆ.
ಭಾರಿ ವಿಎಫ್ಎಕ್ಸ್ ಹೆಚ್ಚಾಗಿರುವ ಈ ಸಿನಿಮಾವನ್ನು ಸುಮಾರು ಮೂನ್ನೂರು ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ.
ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ಈ ಸಿನಿಮಾ ಇಲ್ಲಿಯವರೆಗೂ 55 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದೆ. ಇನ್ನು ಮೂವಿಗೆ ದೊಡ್ಡ ಹಿಟ್ ಟಾಕ್ ಇಲ್ಲದೇ ಇರುವುದರಿಂದ ಜನರು ಕೂಡ ಸಿನಮಾ ನೋಡಲು ನಿರಾಸಕ್ತಿ ತೋರುತ್ತಿದ್ದಾರೆ.
ಇನ್ನು ಕೆಲವೆಡೆ ಥಿಯೇಟರ್ ನಲ್ಲಿ ಬಹುತೇಕ ಸೀಟುಗಳು ಖಾಲಿ ಇರುವುದರಿಂದ ‘ಪೃಥ್ವಿರಾಜ್’ ಸಿನಿಮಾ ನಿಲ್ಲಿಸಲಾಗಿದೆ ಎಂಬ ಸುದ್ದಿ ಬರುತ್ತಿದೆ. ಜೂನ್ 3 ರಂದು ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.