ಇಂದು ಬಾಲಿವುಡ್ ನ ಸ್ಟಾರ್ ನಟಿ , ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ಅವರ ತಂದೆಯ ಹುಟ್ಟುಹಬ್ಬ.. ಈ ಪ್ರಯುಕ್ತ ನಟಿ ತಮ್ಮ ಪರಿವಾರದವರೊಂದಿಗೆ ತಿರುಪತಿಗೆ ಭೇಟಿ ನೀಡಿದ್ದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
ಇತ್ತೀಚೆಗೆ 75ನೇ ಕಾನ್ ಚಿತ್ರೋತ್ಸವದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡ ದೀಪಿಕಾ ಇದೀಗ ಭಾರತಕ್ಕೆ ಮರಳಿದ್ದು ಮತ್ತೆ ಸುದ್ದಿಯಲ್ಲಿದ್ದಾರೆ.. ತಂದೆ ಪ್ರಕಾಶ್ ಪಡುಕೋಣೆ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ.
ಅಂದ್ಹಾಗೆ ದೀಪಿಕಾ ಸದ್ಯ ಶಾರುಖ್ ನಟನೆಯ ಪಠಾಣ್ ಸಿನಿಮಾದಲ್ಲಿ ಬ್ಯುಸಿಯಿದ್ಧಾರೆ. ಜೊತೆಗೆ ಹೃತಿಕ್ ರೋಷನ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಇದರ ಹೊರತಾಗಿ ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಕಾಂಬಿನೇಷನ್ ಹೊಸ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ.