ಕಿಚ್ಚ ಸುದೀಪ್ ಗೆ ಬ್ಯಾಟ್ ಉಡುಗೊರೆ ನೀಡಿದ ಜೋಸ್ ಬಟ್ಲರ್
IPL 2022 ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಬ್ಯಾಟಿಂಗ್ ನಿಂದ ರನ್ ಮಳೆಯನ್ನೇ ಹರಿಸಿದ ವಿಚಾರ ನಿಮಗೆಲ್ಲ ಗೊತ್ತಿರುವುದೇ. ತಾವು ಆಡಿರುವ ಒಟ್ಟು 15 ಪಂದ್ಯಗಳಿಂದ 718ರನ್ ಗಳಿಸಿ ಪ್ರಸಕ್ತ ಸಾಲಿನ ಆರೆಂಜ್ ಕ್ಯಾಪ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದರ ಮಧ್ಯೆ ಸ್ಯಾಂಡಲ್ವುಡ್ನ ನಟ ಕಿಚ್ಚ ಸುದೀಪ್ ಅವರಿಗೆ ವಿಶೇಷ ಗಿಫ್ಟ್ ನೀಡಿ, ಕನ್ನಡಿಗರ ಮನ ಗೆದ್ದಿದ್ದಾರೆ ಬಟ್ಲರ್
2022ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನ ಫೈನಲ್ಗೆ ಕರೆದೊಯ್ಯುವಲ್ಲಿ ಜೋಸ್ ಬಟ್ಲರ್ ಯಶಸ್ವಿಯಾಗಿದ್ದರು. ಐಪಿಎಲ್ನಲ್ಲಿ ತಾವು ಬಳಕೆ ಮಾಡಿರುವ ಬ್ಯಾಟ್ ಅನ್ನ ಸುದೀಪ್ ಅವರಿಗೆ ಉಡುಗೊರೆಯಾಗಿ ನೀಡಿದ್ದು, ಅದರ ಮೇಲೆ ಸಹಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ನಟ ಸುದೀಪ್ ವಿಡಿಯೋ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
“ನಿಜಕ್ಕೂ ನನಗೆ ತುಂಬಾ ಅಚ್ಚರಿಯಾಯಿತು. ನಿಜಕ್ಕೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದನ್ನ ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ಆದರೆ, ಈ ವಿಡಿಯೋ ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ. ವೈಯಕ್ತಿಕವಾಗಿ ನೀವು ಸಹಿ ಮಾಡಿರುವ ಬ್ಯಾಟ್ ನನಗೆ ನೀಡಿರುವುದಕ್ಕೆ ಥ್ಯಾಂಕ್ಸ್ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
A big hug to this sweet surprise and a sweetest gesture.
Thank you @josbuttler@rajasthanroyals @cariappa14
🥂🥳❤️ pic.twitter.com/EyXOqyJQY0— Kichcha Sudeepa (@KicchaSudeep) June 9, 2022