ಬಾಹುಬಲಿ ಸಸಿನಿಮಾ ಮೂಲಕ ಇಂಡಿಯನ್ ಸ್ಟಾರ್ ಆಗಿ ಹೊರ ಹೊಮ್ಮಿರುವ ಪ್ರಭಾಸ್ ಗೆ ದೊಡ್ಡ ಫ್ಯಾಂಡಮ್ ಇದೆ.. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಡಾರ್ಲಿಂಗ್ ಬ್ಯುಸಿಯಿದ್ದಾರೆ.. ಅದ್ರಲ್ಲೂ ಅವರ ರಾಧೆ ಶ್ಯಾಮ್ ಸಿನಿಮಾ ಫ್ಲಾಪ್ ಆದ ನಂತರ ಪ್ರಶಾಂತ್ ನೀಲ್ ಅವರೊಂದಿಗಿನ ಸಲಾರ್ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ..
ಈ ನಡುವೆ ಆಗಾಗ ಪ್ರಭಾಸ್ ಮದುವೆ ವಿಚಾರ ಚರ್ಚೆಯಾಗ್ತಲೇ ಇರುತ್ತೆ.. 40 ದಾಟಿದ್ರೂ ಡಾರ್ಲಿಂಗ್ ಮದುವೆಯಾಗಗಿಲ್ಲ ಯಾವಾಗ ಮದುವೆ , ಯಾರ ಜೊತೆಗೆ ಅನ್ನೋ ಸುದ್ದಿ ಚರ್ಚೆಯಲ್ಲೇ ಇರುತ್ತೆ.. ಇದೀಗ ಅವರ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಸಿಕ್ಕಿದೆ..
ಅಂದ್ಹಾಗೆ ಪ್ರಭಾಸ್ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದೆ.
ಪ್ರಭಾಸ್ ಪಾಲಕರು ಈಗಾಗಲೇ ಹುಡುಗಿಯನ್ನು ಗೊತ್ತು ಮಾಡಿದ್ದು, ಮನೆಯವರು ಆಯ್ಕೆ ಮಾಡಿದ ಹುಡುಗಿಯನ್ನೇ ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ದೇ ಹುಡುಗಿ ಸಿನಿಮಾ ರಂಗದವರಲ್ಲ ಎನ್ನಲಾಗ್ತಿದೆ..
ಇದು ಹಲವರಲ್ಲಿ ಬೇಸರವನ್ನೂ ಮೂಡಿಸಿದೆ.. ಯಾಕಂದ್ರೆ ಆನ್ ಸ್ಕ್ರೀನ್ ನಲ್ಲಿ ಅಭಿಮಾನಿಗಳ ಫೇವರೇಟ್ ಕಪಲ್ ಆಗಿರುವ ಅನುಷ್ಕಾ ಮತ್ತೆ ಪ್ರಭಾಸ್ ಮದುವೆಯಾಗಬೇಕೆಂಬ ಆಸೆ ಅನೇಕರದ್ದು.. ಆಗಾಗ ಇವರಿಬ್ಬರೇ ಮದುವೆಯಾಗಲಿದ್ದಾರೆ.. ಹಾಗಾಗಿಯೇ ಇಷ್ಟು ವರ್ಷಗಳೇ ಕಳೆದ್ರೂ ಇಬ್ರೂ ವಿವಾಹವಾಗಿಲ್ಲ ಎಂಬೆಲ್ಲಾ ಸುದ್ದಿಗಳು ಹರಿದಾಡಿದ್ದವು..