ಹೆಣ್ಣು ಮಗುವಿಗೆ ತಾಯಿಯಾದ ಪ್ರಣಿತಾ ಸುಭಾಷ್
ಮಗು, ವೈದ್ಯರ ಫೋಟೋ ಸೋಷಿಯಲ್ ಮೀಡಿಯಲ್ಲಿ ಶೇರ್
`ಪೊರ್ಕಿ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ
ಕನ್ನಡ , ತೆಲುಗು , ಹಿಂದಿ ಸಿನಿಮಾರಂಗದಲ್ಲೂ ಗುರುತಿಸಿಕೊಂಡಿರುವ ನಟಿ
ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ಪ್ರಣಿತಾ ಹೆರಿಗೆ
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವೈದ್ಯರ ತಂಡ ಮತ್ತು ಮಗುವಿನ ಫೋಟೋವನ್ನ ಪ್ರಣಿತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು , ಅಭಿಮಾನಿಗಳು ಪ್ರಣಿತಾರಿಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಪೊರ್ಕಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪ್ರಣಿತಾ , ತೆಲುಗು , ತಮಿಳು ಹಿಂದಿ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ.. ಮದುವೆಯ ನಂತರ ಸಿನಿಮಾರಂಗದಿಂದ ಬ್ರೇಕ್ ಪಡೆದಿದ್ದ ಪ್ರಣೀತಾ , ತಾವು ಗರ್ಭಿಣಿ ಎಂಬ ವಿಚಾರ ಹಂಚಿಕೊಂಡಾಗಿನಿಂದಲೂ ಆಗಾಗ ಬೇಬಿ ಬಂಪ್ , ಸೀಮಂತ ಫೋಟೋಗಳನ್ನ ಹಂಚಿಕೊಳ್ತಾ ಇದ್ದರು.. ಇದೀಗ ಮಗುವಿಗೆ ಜನ್ಮ ನೀಡಿದ್ದು ತಮ್ಮ ಜರ್ನಿ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.