ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸದಾ ತಮ್ಮ ನೌಟಂಕಿಗಳು ಇಲ್ಲ ಬಟ್ಟೆ , ಇಲ್ಲ ಬಾಯ್ ಫ್ರೆಂಡ್ ಗಳ ವಿಚಾರದಲ್ಲೇ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ಅವರು ಬಾಯ್ ಫ್ರೆಂಡ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಅದ್ರಲ್ಲೂ ಅವರ ಹೊಸ ಬಾಯ್ ಫ್ರೆಂಡ್ ನಮ್ಮ ಮೈಸೂರಿನ ಹುಡುಗ.. ಹೆಸರು ಆದಿಲ್..
ಈತನ ಜೊತೆಗೆ ರಾಕಿ ಸದಾ ಕಾಣಿಸಿಕೊಳ್ತಿದ್ದಾರೆ.. ಇತ್ತೀಚೆಗೆ ಆದಿಲ್ ಜೊತೆಗೆ ಮಾಧ್ಯಮದವರ ಮುಂದೆ ಬಂದ ರಾಖಿ ಬೋಲ್ಡ್ ಹೇಳಿಕೆ ನೀಡಿದ್ದು ಆಕೆಯ ಬಾಯ್ ಫ್ರೆಂಡ್ ಗೂ ಶಾಕ್ ಆಗಿದೆ..
ಹೌದು.. ! ಆದಿಲ್ ಜೊತೆ ‘ಜನಹಿತ್ ಮೇನ್ ಜಾರಿ’ ಸಿನಿಮಾವನ್ನು ವೀಕ್ಷಿಸಿದ್ದು, ಅದರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಕಾಂಡೋಮ್ ಅರಿವಿನ ಬಗ್ಗೆ ಹೇಳಿದ್ದಾರೆ.
ಆದಿಲ್ ದುರ್ನಾನಿ ಅಭಿನಯದ ‘ಜನಹಿತ್ ಮೇನ್ ಜಾರಿ’ ಸಿನಿಮಾದಲ್ಲಿ ಸುರಕ್ಷಿತ್ ಲೈಂಗಿಕತೆಯ ಕುರಿತು ಕಥೆಯನ್ನು ಹೇಳಲಾಗಿದೆ. ಅಲ್ಲದೇ, ಕಾಂಡೋಮ್ ಬಳಸುವ ಕುರಿತಾಗಿಯೂ ಜಾಗೃತೆ ಮೂಡಿಸಲಾಗಿದೆ. ಈ ಸಿನಿಮಾವನ್ನು ಬಾಯ್ ಫ್ರೆಂಡ್ ಆದಿಲ್ ಜೊತೆ ನೋಡಿಕೊಂಡು ಬಂದ ರಾಕಿ, ಮಾಧ್ಯಮಗಳ ಜೊತೆ ಮಾತನಾಡುತ್ತಾ ಜನರ ಮನಸ್ಸು ವಿಚಿತ್ರವಾಗಿದೆ. ಮದ್ಯವನ್ನು ಖರೀದಿಸಲು ಗಂಟೆಗಟ್ಟಲೆ ರಸ್ತೆಯಲ್ಲಿ ಕ್ಯೂ ನಿಲ್ಲುತ್ತಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಖರೀದಿಸಲು ಮಾತ್ರ ಮುಜುಗರ ಪಡುತ್ತಾರೆ ಎಂದು ಆದಿಲ್ ಮುಖ ನೋಡಿಕೊಂಡು ನುಡಿದಿದ್ದಾರೆ.
ರಾಕಿ ಈ ಮಾತುಗಳನ್ನು ಕೇಳಿ ಆದಿಲ್ ಶಾಕ್ ಆಗಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ..
ಇದೇ ವೇಳೆ ರಾಕಿ ತಾವು HIV ಸೋಂಕಿತನನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ.. ಆ ಸೋಂಕಿತನ ಬಳಿ ಕಾಂಡೋಮ್ ಯಾತಕ್ಕೆ ಬಳಸಲಿಲ್ಲ ಎಂದು ಪ್ರಶ್ನೆ ಮಾಡಿದ್ದು , ಆತ ಮುಜುಗರದಿಂದಾಗಿ ಏನೂ ಹೇಳಲಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ದೇ ದಯವಿಟ್ಟು ಕಾಂಡೋಮ್ ಬಳಸಿ ಎಂದು ಕರೆ ನೀಡಿದ್ದಾರೆ.