ಕೊರೊನಾ ಲಾಕ್ ಡೌನ್ ಸಮಯದಿಂದ ಹಿಡಿದು ಇಲ್ಲಿಯವರೆಗೂ ಬಡವರಿಗೆ ಸಹಾಯ ಮಾಡುತ್ತಾ ,, ಕಷ್ಟ ಅಂತ ಯಾರೇ ಬಂಡ್ರೂ ಅವರಿಗೆ ನೆರವಾಗುತ್ತಾ ಬಡವರ ಪಾಲಿನ ರಿಯಲ್ ಹೀರೋ ಆಗಿ ಹೊರಹೊಮ್ಮಿರುವ ಬಹುಭಾಷಾ ನಟ ಸೋನು ಸೂದ್ ಇತ್ತೀಚೆಗೆ ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾಗಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ..
ಬಿಹಾರ್ ನ ಗ್ರಾಮದ ಹುಡುಗಿ ಚಹುಮುಖಿಯ ದೇಹದಲ್ಲಿ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ್ದಳು. ಮಗುವಿನ ಪೋಷಕರಿಗೆ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ನೊಂದಿದ್ದರು.. ಮಗುವಿನ ಚಿಕಿತ್ಸೆಯ ಖರ್ಚನ್ನು ಈಗ ಸೋನು ಅವರೇ ನೋಡಿಕೊಂಡಿದ್ದು. ಇದೀಗ ಶಸ್ತ್ರ ಚಿಕಿತ್ಸೆಯ ನಂತರ ಮಗುವಿನ ಆರೋಗ್ಯ ಸುಧಾರಿಸಿದೆ. ಮಗುವಿನ ಸದ್ಯದ ಸ್ಥಿತಿಯ ಕುರಿತು ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.