ಏಪ್ರಿಲ್ 2022 ರಲ್ಲಿ, ಅಕ್ಷಯ್ ಕುಮಾರ್ ಅವರು ಸೂರ್ಯ ಅವರ ಅಭಿನಯದ ತಮಿಳು ಸಿನಿಮಾ ಸೂರರೈ ಪೊಟ್ರು ಚಿತ್ರದ ಅಧಿಕೃತ ಹಿಂದಿ ರಿಮೇಕ್ ನಲ್ಲಿ ನಟಿಸುವುದಾಗಿ ಘೋಷಿಸಿದರು.
ಅಕ್ಷಯ್ ಕುಮಾರ್ ಅವರು ರಾಧಿಕಾ ಮದನ್ ಅವರೊಂದಿಗೆ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ತಯಾರಕರು ಇನ್ನೂ ಹಿಂದಿ ರಿಮೇಕ್ನ ಶೀರ್ಷಿಕೆಯನ್ನು ಘೋಷಿಸಿಲ್ಲ. ವಾರಾಂತ್ಯದಲ್ಲಿ, ಅಕ್ಷಯ್ ಮತ್ತು ರಾಧಿಕಾ ಅವರ ಚಿತ್ರಕ್ಕೆ ಸ್ಟಾರ್ಟ್ಅಪ್ ಎಂದು ಹೆಸರಿಡಲಾಗಿದೆ ಎಂಬ ವದಂತಿಗಳು ಹಬ್ಬಿದ್ದವು.
ಸಿನಿಮಾತಂಡ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದಿರುವಾಗ, ಹಿಂದಿ ರಿಮೇಕ್ನ ನಿರ್ಮಾಪಕ ವಿಕ್ರಮ್ ಮಲ್ಹೋತ್ರಾ ಪ್ರತಿಕ್ರಿಯಿಸಿದ್ದಾರೆ. ಚಿತ್ರದ ವದಂತಿಯ ಶೀರ್ಷಿಕೆಯನ್ನು ಅವರು ನಿರಾಕರಿಸಿದರು. ಚಿತ್ರದ ಶೀರ್ಷಿಕೆ ಸ್ಟಾರ್ಟಪ್ ಆಗಿದೆಯೇ ಎಂದು ಕೇಳಿದಾಗ, “ಇನ್ನೂ ಯಾವುದೇ ಶೀರ್ಷಿಕೆಯನ್ನು ದೃಢೀಕರಿಸಲಾಗಿಲ್ಲ” ಎಂದು ಅವರು ಹೇಳಿದರು.
ಮೂಲಗಳನ್ನು ಉಲ್ಲೇಖಿಸಿ, ಚಿತ್ರದ ಶೀರ್ಷಿಕೆ ವಿಭಿನ್ನವಾಗಿರುತ್ತದೆ ಮತ್ತು ಪ್ರಸ್ತುತ ಸೂಕ್ತವಾದ ಶೀರ್ಷಿಕೆಯನ್ನು ಕಂಡುಹಿಡಿಯಲಾಗುತ್ತಿದೆ ಎಂದು ಹೇಳಿರೋದದಾಗಿ ವರದಿಯಾಗಿದೆ..