ಖ್ಯಾತ ಟಾಲಿವುಡ್ ನ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲ ಆತ್ಮಹತ್ಯೆ
ಟಾಲಿವುಡ್, ಬಾಲಿವುಡ್ ನ ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35 ವರ್ಷದ ಪ್ರತ್ಯೂಷಾ ಲಿವಿಂಗ್ ರೂಮಿನಲ್ಲಿ ಕಾರ್ಬನ್ ಮಾನಾಕ್ಸೈಡ್ ಬಾಟಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ
ಪ್ರತ್ಯೂಷಾ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಉಸಿರಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿವೃತ್ತ ಐಆರ್‌ಎಸ್ ಅಧಿಕಾರಿ ಕೃಷ್ಣರಾವ್ ಅವರ ಪುತ್ರಿಯಾದ ಪ್ರತ್ಯೂಷಾ ದೇಶದ ಟಾಪ್ 30 ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರು. ಬಾಲಿವುಡ್ ಮತ್ತು ಟಾಲಿವುಡ್‌ನ ಪ್ರಸಿದ್ಧ ನಾಯಕಿಯರಿಗೆ ಪ್ರತ್ಯೂಷಾ ಡ್ರೆಸ್ ಡಿಸೈನ್ ಮಾಡಿದ್ದಾರೆ.
ಸೂಸೈಡ್ ನೋಟ್ ಪತ್ತೆ
ಪ್ರತ್ಯೂಷಾ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ ಪ್ರತ್ಯೂಷಾ ಕೋಣೆಯಿಂದ ಸೂಸೈಡ್ ನೋಟ್ ಪತ್ತೆಯಾಗಿದೆ ಎಂದು ಬಂಜಾರಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಾಗೇಶ್ವರ ರಾವ್ ತಿಳಿಸಿದ್ದಾರೆ. “ನಾನು ತುಂಬಾ ಒಂಟಿತನ ಮತ್ತು ಖಿನ್ನತೆಗೆ ಒಳಗಾಗಿದ್ದೇನೆ” ಹೆತ್ತವರಿಗೆ ನಾನು ಹೊರೆಯಾಗಲು ಬಯಸುವುದಿಲ್ಲ, ತಾನು ಬಯಸಿದ ಜೀವನ ಇದಲ್ಲ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆಂತೆ
ಪ್ರತ್ಯೂಷಾ ಫ್ಯಾಶನ್ ಡಿಸೈನಿಂಗ್ ಓದಿದ್ದು ಅಮೆರಿಕಾದಲ್ಲಿ ಇದಾದ ನಂತರ ಪ್ರತ್ಯೂಷಾ ಹೈದರಾಬಾದ್‌ನಲ್ಲಿ ಫ್ಯಾಶನ್ ಡಿಸೈನರ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. 2013ರಲ್ಲಿ ತನ್ನದೇ ಹೆಸರಿನಲ್ಲಿ ಬ್ರಾಂಡ್ ಆರಂಭಿಸಿದ್ದರು. ಇದಾದ ನಂತರ ಪ್ರತ್ಯೂಷಾ ಅತ್ಯಂತ ಜನಪ್ರಿಯ ಫ್ಯಾಷನ್ ಡಿಸೈನರ್ ಹೊರಹೊಮ್ಮಿದ್ದರು
ಟಾಲಿವುಡ್ ಮತ್ತು ಬಾಲಿವುಡ್ ನ ಕೆಲವು ದೊಡ್ಡ ಸೆಲೆಬ್ರಿಟಿಗಳ ಜೊತೆ ವರ್ಕ್ ಮಾಡಿದ್ದಾರೆ. ಮಾಧುರಿ ದೀಕ್ಷಿತ್, ರವೀನಾ ಟಂಡನ್, ಕಾಜೋಲ್, ಪರಿಣಿತಿ ಚೋಪ್ರಾ, ಹುಮಾ ಖುರೇಷಿ, ಶ್ರಿಯಾ ಸರನ್, ಕಾಜಲ್ ಅಗರ್ವಾಲ್, ಜೂಹಿ ಚಾವ್ಲಾ, ಗೌಹರ್ ಖಾನ್, ನೇಹಾ ಧೂಪಿಯಾ, ಭೂಮಿ ಪೆಡ್ನೇಕರ್ ಸೇರಿದಂತೆ ಅನೇಕ ಖ್ಯಾತನಾಮರಿಗೆ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.