ಟಾಲಿವುಡ್ ನ ಪ್ರಮುಖ ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಾಜ್ ಅವರು ಅಡಿವಿ ಶೇಶ್ ಅಭಿನಯದ ಮೇಜರ್ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೇಜರ್ ಸಿನಿಮಾ ನೋಡಿದ ಬಳಿಕ ಅವರು ವಿಡಿಯೋ ಬಿಡುಗಡೆ ಮಾಡಿದ್ದಾರೆ. “ಮೇಜರ್ ಸಿನಿಮಾ ನೋಡಿದೆ. ಚಿತ್ರವನ್ನು ತುಂಬಾ ಚೆನ್ನಾಗಿ ಚಿತ್ರೀಕರಿಸಲಾಗಿದೆ.
ಪಾತ್ರವರ್ಗದವರೆಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ. ನಿರ್ಮಾಣ ಮೌಲ್ಯಗಳೂ ಚೆನ್ನಾಗಿವೆ. ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಇದೇ ವೇಳೆ ಅವರು ಪ್ಯಾನ್ ಇಂಡಿಯಾ ಚಿತ್ರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಧ್ಯೆ ಕಾಲದಲ್ಲಿ ನಾವು ಪ್ಯಾನ್ ಇಂಡಿಯಾ ಸಿನಿಮಾ, ಪಾನ್ ಇಂಡಿಯಾ ಪ್ರಾಜೆಕ್ಟ್ ನೋಡುತ್ತಿದ್ದೇವೆ. ನಿಜ ಹೇಳಬೇಕು ಅಂದ್ರೆ ಮೇಜರ್ ಸಿನಿಮಾ ನಿಜವಾದ ಪಾನ್ ಇಂಡಿಯಾ ಕಥೆ.
ಆದ್ರೆ ಕೆಲವರು ನಮ್ಮದು ಪಾನ್ ಇಂಡಿಯಾ ಪ್ರಾಜೆಕ್ಟ್, ಭಾರಿ ಬಜೆಟ್ ಇದೆ. ಲಾಸ್ ಆಗುತ್ತಿದೆ ಎಂದು ಸಿನಿಮಾದ ಟಿಕೆಟ್ ಬೆಲೆಯನ್ನು ಹೆಚ್ಚಿಸುವ ಅವಕಾಶವನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಂತಹ ಸಿನಿಮಾಗಳಿಗೆ ಮೇಜರ್ ಸಿನಿಮಾ ಕಡಿಮೆ ಇಲ್ಲ. ಟೆಕ್ನಿಕಲ್, ಕ್ವಾಲಿಟಿಯಲ್ಲಿ ಮೇಜರ್ ಸಿನಿಮಾ ತುಂಬಾ ಚೆನ್ನಾಗಿದೆ. ಈ ಸಿನಿಮಾವನ್ನು ಕೇವಲ 25 ಕೋಟಿ ರುಪಾಯಿ ಬಜೆಟ್ ನಲ್ಲಿ ಮುಗಿಸಲಾಗಿದೆ. ಪಾನ್ ಇಂಡಿಯಾ ರಿಲೀಸ್ ಮಾಡಿ ಸಕ್ಸಸ್ ಕಂಡಿದ್ದಾರೆ.
ಹಾಗಾದ್ರೆ ಇನ್ನುಳಿದ ಸಿನಿಮಾಗಳಿಗೆ ಯಾಕೆ ನೂರು ಕೋಟಿ ಖರ್ಚು ಮಾಡುತ್ತಿದ್ದೀರಾ..? ಮೇಜರ್ ಸಿನಿಮಾಗೆ ಆಗದಿರುವ ಖರ್ಚು ನಿಮ್ಮ ಸಿನಮಾಗಳಿಗೆ ಯಾಕೆ ಆಗುತ್ತಿದೆ.
ಈ ಬಗ್ಗೆ ನಿರ್ಮಾಪಕರು, ನಟರು ಯೋಚನೆ ಮಾಡಬೇಕಾಗಿದೆ. ಶೂಟೀಂಗ್ ಎಂದು ಹೇಳಿ ಕ್ಯಾರಿವ್ಯಾನ್ ನಲ್ಲಿ ಕುಳಿತುಕೊಳ್ಳುತ್ತಿದ್ದಾರಾ..? ಸಿನಿಮಾ ಮಾಡಿದ್ರೆ ಪ್ಯಾಷನ್ ನಿಂದ ಮಾಡಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.