ಇಂಡಿಯಾದಲ್ಲಿ ಯಶ್ ಮೇನಿಯಾ ಹೇಗಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ.. KGF 2 ಸಿನಿಮಾ ಆದ ಮೇಲೆ ಯಶ್ ಗೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಾಗಿದ್ದಾರೆ…
ಇಂಡಿಯನ್ ಸ್ಟಾರ್ ಆಗಿ ಹಗೊರಹೊಮ್ಮಿರುವ ಯಶ್ ಮುಂದಿನ ಸಿನಿಮಾ ಅಪ್ ಡೇಟ್ ಗಳಿಗಾಗಿ ಜಾತಕ ಪಕ್ಷಿಯಂತೆ ಕಾಯ್ತಿದ್ದಾರೆ.. ಈ ನಡುವೆ ಒಂದು ಧಮಾಕೆದಾರ್ ಸುದ್ದಿ ಯಶ್ ಮುಂದಿನ ಸಿನಿಮಾ ಬಗ್ಗೆ ಹರಿದಾಡ್ತಿದೆ..
ಅದೇನೆಂದ್ರೆ ಯಶ್ ಅವರ ಮುಂದಿನ ಸಿನಿಮಾದಲ್ಲಿ ಕರಾವಳಿ ಬೆಡಗಿ , ಬುಟ್ಟ ಬೊಮ್ಮ ಅಂದ್ರೆ ಪೂಜಾ ಹೆಗ್ಡೆ ನಾಯಕಿಯಾಗಲಿದ್ಧಾರೆ ಎಂದು ಹೇಳಲಾಗ್ತಿದೆ..
ಹೌದು..! ಯಶ್ ಮುಂದೆ ಪ್ಯಾನ್ ಇಂಡಿಯಾ ಸಿನಿಮಾಗೆ ತಯಾರಿ ನಡೆಸುತ್ತಿದ್ದು ಇದು ಕೂಡ ಬಿಗ್ ಬಜೆಟ್ ಸಿನಿಮಾವಾಗಿರಲಿದೆ.. ಮೂಲಗಳ ಪ್ರಕಾರ ಮಫ್ತಿ ನಿರ್ದೇಶಕರ ಜೊತೆಗೆ ಯಶ್ ಸಿನಿಮಾ ಮಾಡಲಿದ್ಧಾರೆ ಎನ್ನಲಾಗಿದೆ.. ಇದೇ ಸಿನಿಮಾಗೆ ಪೂಜಾ ನಾಯಕಿ ಎನ್ನಲಾಗ್ತಿದೆ..
ಒಂದು ವೇಳೆ ಈ ಸುದ್ದಿ ನಿಜವೇ ಆದ್ರೆ ಕರ್ನಾಟಕ ಮೂಲದ ಪೂಜಾ ಹೆಗ್ಡೆಯ ಕನ್ನಡದ ಮೊದಲ ಸಿನಿಮಾವಿದಾಗಿರಲಿದೆ.. ಸಾಲು ಸಾಲು ಬರೀ ಸೋಲನ್ನೇ ಕಂಡಿರುವ ಪೂಜಾಗೆ ಆಫರ್ ಗಳೇನೂ ಕಡಿಮೆಯಾಗಿಲ್ಲ.. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.. ಈಗ ಯಶ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..