777 Charlie : ಬಾಕ್ಸ್ ಆಫೀಸ್ ನಲ್ಲಿ ‘ಚಾರ್ಲಿ’ ಕಮಾಲ್ : ವೀಕೆಂಡ್ ನಲ್ಲಿ ಸಿನಿಮಾದ ಕಲೆಕ್ಷನ್ ಎಷ್ಟು..??
777 ಚಾರ್ಲಿ ಸಿನಿಮಾ ಐದೂ ಭಾಷೆಗಳಲ್ಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ.. ರಕ್ಷಿತ್ ಶೆಟ್ಟಿ ಈ ಸಿನಿಮಾ ಪ್ರೇಕ್ಷಕರನ್ನ ಭಾವನಾತ್ಮಕವಾಗಿ ಬೆಸೆಯುತ್ತಿದ್ದು , ಹಾಸ್ಯಭರಿತ ಎಮೋಷನಲ್ ಸಿನಿಮಾವಾಗಿದೆ.. ನಾಯಿ ಮತ್ತೆ ಮನುಷ್ಯನ ನಡುವಿನ ಬಾಂಧವ್ಯ ತೋರಿಸುವ ಸಿನಿಮಾವಾಗಿದ್ದು , ಬಾಕ್ಸ್ ಆಫೀಸ್ ನಲ್ಲಿ ವಿಕ್ರಮ್ ಸಿನಿಮಾದ ಮುಂದೆಯೂ ಅಬ್ಬರಿಸುತ್ತಿದೆ..
ವರದಿಗಳ ಪ್ರಕಾರ, 777 ಚಾರ್ಲಿ ತನ್ನ 2 ನೇ ದಿನದಲ್ಲಿ 8 ಕೋಟಿ ರೂ ಗಳಿಸಿದೆ. ಮೊದಲ ದಿನದ ಕಲೆಕ್ಷನ್ 6.5 ಕೋಟಿಗಳೊಂದಿಗೆ ಹೋಲಿಸಿದರೆ, ಇದು 23% ರಷ್ಟು ಉತ್ತಮ ಬೆಳವಣಿಗೆ ಕಂಡಿದೆ. ಒಟ್ಟಾರೆ ಸಿನಿಮಾದ ಕಲೆಕ್ಷನ್ ಇಲ್ಲಿಯವರೆಗೂ ಸುಮಾರು 23 ಕೋಟಿ ರೂಪಾಯಿ ದಾಟಿರುವ ಮಾಹಿತಿ ಸಿಕ್ಕಿದೆ..
ಸಿನಿಮಾ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ.