ಬಾಲಿವುಡ್ ನ ಡ್ರಾಮಾ ಕ್ವೀನ್ ಎಂದ್ರೆ ಅದು ರಾಕಿ ಸಾವಂತ್.. ರಾಖಿ ಸಾವಂತ್ ಸದಾ ತಮ್ಮ ನೌಟಂಕಿಗಳು ಇಲ್ಲ ಬಟ್ಟೆ , ಇಲ್ಲ ಬಾಯ್ ಫ್ರೆಂಡ್ ಗಳ ವಿಚಾರದಲ್ಲೇ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ಅವರು ಬಾಯ್ ಫ್ರೆಂಡ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಅದ್ರಲ್ಲೂ ಅವರ ಹೊಸ ಬಾಯ್ ಫ್ರೆಂಡ್ ನಮ್ಮ ಮೈಸೂರಿನ ಹುಡುಗ.. ಹೆಸರು ಆದಿಲ್..ಆಗಾಗ ಅವರು ಬಟ್ಟೆ , ವಿವಾದಗಳು , ವಿಚಿತ್ರ ವರ್ತನೆ , ಇಲ್ಲ ಪ್ರೇಮಿ , ಪತಿ ವಿಚಾರವಾಗಿಯೇ ಸುದ್ದಿಯಲ್ಲಿರೋದು ಹೆಚ್ಚು..
ಈತನ ಜೊತೆಗೆ ರಾಕಿ ಸದಾ ಕಾಣಿಸಿಕೊಳ್ತಿದ್ದಾರೆ.. ಇತ್ತೀಚೆಗೆ ಆದಿಲ್ ಜೊತೆಗೆ ಮಾಧ್ಯಮದವರ ಮುಂದೆ ಬಂದ ರಾಖಿ ಬೋಲ್ಡ್ ಹೇಳಿಕೆ ನೀಡಿದ್ದರು.. ಕಾಂಡೊಮ್ ಖರೀದಿ ಬಗ್ಗೆ ರಾಕಿ ಹೇಳಿಕೆ ವೈರಲ್ ಆಗಿತ್ತು.. ಆದಿಲ್ ಜೊತೆ ‘ಜನಹಿತ್ ಮೇನ್ ಜಾರಿ’ ಸಿನಿಮಾವನ್ನು ವೀಕ್ಷಿಸಿದ್ದು, ಅದರ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಕಾಂಡೋಮ್ ಅರಿವಿನ ಬಗ್ಗೆ ಹೇಳಿದ್ದರು..
ಮದ್ಯವನ್ನು ಖರೀದಿಸಲು ಗಂಟೆಗಟ್ಟಲೆ ರಸ್ತೆಯಲ್ಲಿ ಕ್ಯೂ ನಿಲ್ಲುತ್ತಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಖರೀದಿಸಲು ಮಾತ್ರ ಮುಜುಗರ ಪಡುತ್ತಾರೆ ಎಂದು ಆದಿಲ್ ಮುಖ ನೋಡಿಕೊಂಡು ನುಡಿದಿದ್ದರು.. ಈ ವಿಚಾರವಾಗಿ ಭಾರೀ ಸುಉದ್ದಿಯಲ್ಲಿದ್ರು..
ಈಗ ರಾಖಿ ಪೊಲೀಸ್ ಠಾಣೆ ಎದುರು ಗಳಗಳನೆ ಅತ್ತಿದ್ದು ಮತ್ತೊಮ್ಮೆ ಸುದ್ದಿಯಾಗ್ತಿದ್ದಾರೆ..
ಇತ್ತೀಚೆಗೆ ಪೊಲೀಸ್ ಠಾಣೆಗೆ ತೆರಳಿದ್ದ ರಾಖಿ ಅಚ್ಚರಿ ಮೂಡಿಸಿದ್ದರು.. ಠಾಣೆಯಿಂದ ವಾಪಸ್ಸು ಬಂದಾಗ ಅಲ್ಲೇ ಹೊರಗೆ ಗಳಗಳನೇ ಕಣ್ಣೀರಿಟ್ಟಿದ್ದಾರೆ.. ಆಕೆಯ ಬಾಯ್ ಫ್ರೆಂಡ್ ಆದಿಲ್ ರಾಖಿಯನ್ನ ಸಮಾಧಾನ ಮಾಡಿದರೂ, ರಾಖಿ ಅಳು ನಿಂತಿಲ್ಲ.
ಈ ಘಟನೆ ನಡೆದಿರೋದು ಮುಂಬೈನ ಓಶಿವಾರಾ ಪೊಲೀಸ್ ಠಾಣೆ ಎದುರು.. ತನ್ನ ಮಾಜಿ ಪತಿ ರಿತೇಶ್ ತುಂಬಾ ಹಿಂಸೆ ನೀಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ರಿತೇಶ್ ಹ್ಯಾಕ್ ಮಾಡಿ ಮಿಸ್ ಯ್ಯೂಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ದೂರಿದ್ದಾರೆ. ಅಲ್ಲದೇ, ಆದಿಲ್ ಮತ್ತು ತಮ್ಮ ನಡುವಿನ ಸಂಬಂಧವನ್ನು ರಿತೀಶ್ ಹಾಳು ಮಾಡುತ್ತಿದ್ದಾನೆ ಎಂದಿದ್ದಾರೆ.