ಮಲ್ಟಿ ಸ್ಟಾರರ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿವೆ.
ಟಾಲಿವುಡ್ ನಲ್ಲಿ ಆರ್ ಆರ್ ಆರ್, ಕಾಲಿವುಡ್ ನಲ್ಲಿ ವಿಕ್ರಂ ಸಿನಿಮಾಗಳು ಗಲ್ಲಾ ಪೆಟ್ಟಿಗೆಯನ್ನು ಶೇಖ್ ಮಾಡಿವೆ.
ಈ ಹಿನ್ನಲೆಯಲ್ಲಿ ವಿಕ್ರಂ ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಅದೇ ಟ್ರೆಂಡ್ ಮುಂದುವರಿಸಲು ಮುಂದಾಗಿದ್ದಾರೆ.
ಲೋಕೇಶ್ ತಮ್ಮ ಮುಂದಿನ ಸಿನಿಮಾವನ್ನು ದಳಪತಿ ವಿಜಯ್ ಜೊತೆ ಮಾಡುತ್ತಿರೋದು ಗೊತ್ತೇ ಇದೆ.
ಆ ಸಿನಿಮಾದಲ್ಲಿ ವಿಜಯ್ ಜೊತೆಗೆ ತಮಿಳಿನ ಸ್ಟಾರ್ ನಟ ಗುದ್ದಾಡಲಿದ್ದಾರಂತೆ.
ಲೋಕೇಶ್ ಸಿನಿಮಾದಲ್ಲಿ ಇಬ್ಬರು ಹೀರೋಗಳು ಅನ್ನೋದು ಸಾಮಾನ್ಯವಾಗಿ ಬಿಟ್ಟಿದೆ.
ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಹೀರೋ ಆಗಿದ್ದರೇ ವಿಜಯ್ ಸೇತುಪತಿ ವಿಲನ್ ಆಗಿ ಕಾಣಿಸಿಕೊಂಡಿದ್ದರು.
ವಿಕ್ರಂ ಸಿನಿಮಾದಲ್ಲಿ ಕಮಲ್ ಹಸನ್, ವಿಜಯ್ ಸೇತುಪತಿ, ಫಹದ್ ಫಾಸಲ್ ಕಾಣಿಸಿದ್ದಾರೆ.
ಅದೇ ರೀತಿ ಇದೀಗ ವಿಜಯ್ ನಟಿಸಲಿರುವ ಹೊಸ ಸಿನಿಮಾದಲ್ಲಿ ಸ್ಟಾರ್ ಹೀರೋ ಧನುಷ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.
ಈ ವಿಚಾರವಾಗಿ ನಟ ಧನುಷ್ ಜೊತೆ ಲೋಕೇಶ್ ಮಾತನಾಡಿದ್ದಾರಂತೆ. ಇದಕ್ಕೆ ದನುಷ್ ಓಕೆ ಎಂದಿರುವುದಾಗಿ ತಿಳಿದು ಬಂದಿದೆ.