ದರ್ಶನ್ ಅಭಿನಯದ ಬಹುನಿರೀಕ್ಷೆಯ ಕ್ರಾಂತಿ ಸಿನಿಮಾ ರಿಲೀಸ್ ಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ… ರಾಬರ್ಟ್ ನ ನಂತರ ಬಿಡುಗಡೆಯಾಗ್ತಿರುವ ಡಿ ಬಾಸ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದು , ಈ ಸಿನಿಮಾ ರಿಲೀಸ್ ದಿನ ಕರ್ನಾಟಕದಲ್ಲಿ ದೊಡ್ಡ ಜಾತ್ರೆಯನ್ನೇ ನಡೆಸುವ ಪ್ಲಾನ್ ನಲ್ಲಿ ಫ್ಯಾನ್ಸ್ ಇದ್ದಾರೆ..
ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಕೂಡ ರಿಲೀಸ್ ಆಗಿದ್ದು ಸಿನಿಮಾದಲ್ಲಿ ದಚ್ಚು ಡಿಫರೆಂಟ್ ಆಗಿ ಕಾಣಿಸಿಕೊಳ್ತಿದ್ದಾರೆ… ದಾಸನ 55ನೇ ಸಿನಿಮಾ ಅಕ್ಷರ ಕ್ರಾಂತಿ ಸಿನಿಮಾವೆನ್ನಲಾಗ್ತಿದೆ.. ಇದೇ ವರ್ಷ ನವೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗ್ತಿದೆ..