ಶೀಘ್ರದಲ್ಲಿಯೇ ತೆರೆಗೆ ವಿ ಜಿ ಸಿದ್ಧಾರ್ಥ್ ಬಯೋಪಿಕ್
‘ಕೆಫೆ ಕಾಫಿ ಡೇ’ ಸಂಸ್ಥಾಪಕ ವಿ ಜಿ ಸಿದ್ಧಾರ್ಥ್ ಜೀವನ ಚರಿತ್ರೆ ಶೀಘ್ರದಲ್ಲೇ ತೆರೆಗೆ ಬರಲಿದೆ.
ಪ್ರಮುಖ ನಿರ್ಮಾಣ ಸಂಸ್ಥೆ ಟಿ-ಸೀರೀಸ್, ಆಲ್ಮೈಟಿ ಮೋಷನ್ ಪಿಕ್ಚರ್ ಮತ್ತು ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್, ಸಿದಾರ್ಥ್ ಬಯೋಪಿಕ್ ನಿರ್ಮಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ತನಿಖಾ ಪತ್ರಕರ್ತರಾದ ರುಕ್ಮಿಣಿ ಬಿಆರ್, ಪ್ರೊಸೆನ್ಜಿತ್ ದತ್ತಾ ಅವರ ಕಾಫಿ ಕಿಂಗ್ ಪುಸ್ತಕವನ್ನು ಆಧರಿಸಿ ಬಯೋಪಿಕ್ ಅನ್ನು ತೆರೆಗೆ ತರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಫಿಯನ್ನು ನಮ್ಮ ಜೀವನದ ಭಾಗ ಮಾಡಿದ ವಿ ಜಿ ಸಿದ್ಧಾರ್ಥ್ ಅವರು ವ್ಯಾಪಾಸ್ಥರಾಗಿ ಸಾಕಷ್ಟು ಗೆಲುವುಗಳನ್ನು ಸಾಧಿಸಿದ್ದಾರೆ. ಅಂತಹ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ತುಂಬಾ ಶಾಕಿಂಗ್.
ಸಕ್ಸಸ್ ಫುಲ್ ಬಿಜಿನೆಸ್ ಮೆನ್ ಆಗಿದ್ದ ವಿಜಿ ಸಿದ್ದಾರ್ಥ್ ಜೀವನದಲ್ಲಿ ಸಂಭವಿಸಿದ ಏರಿಳಿತಗಳನ್ನು ಕಾಫಿ ಕಿಂಗ್ ; ದಿ ದಿ ಸ್ವಿಫ್ಟ್ ರೈಸ್ ಅಂಡ್ ಸಡನ್ ಡೇ ಆಫ್ ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಪುಸ್ತಕದಲ್ಲಿ ತಿಳಿಸಲಾಗಿದೆ. ಇದನ್ನ ಬೆಳ್ಳೆತೆರೆ ಮೇಲೆ ತೋರಿಸಲಾಗುತ್ತದೆ
ಅದಕ್ಕಾಗಿಯೇ ಅವರ ಬಯೋಪಿಕ್ ತೆಗೆಯುತ್ತಿದ್ದೇವೆ. ಶೀಘ್ರದಲ್ಲಿಯೇ ಪೂರ್ತಿ ವಿವರಗಳನ್ನು ಪ್ರಕಟಿಸುತ್ತೇವೆ ಎಂದು ಟಿ ಸಿರೀಸ್ ಚೇರ್ಮನ್ ಭೂಷನ್ ಕುಮಾರ್ ತಿಳಿಸಿದ್ದಾರೆ.