ಕನ್ನಡದ ಹುಡುಗಿ ಪೂಜಾ ಹೆಗ್ಡೆ ಟಾಲಿವುಡ್ , ಕಾಲಿವುಡ್ ನಲ್ಲಿ ಸ್ಟಾರ್ ನಟಿ… ಬಹುಬೇಡಿಕಯ ನಟಿ.. ಅತಿ ಹೆಚ್ಚು ಸಂಭಾವವನೆ ಪಡೆಯುವ ನಟಿಯರ ಪೈಕಿ ಒಬ್ಬರು.. ಟಾಪ್ 10 ಟಾಲಿವುಡ್ ನಟಿಯರ ಪೈಕಿ ಅಗ್ರಸ್ಥಾನದಲ್ಲಿರೋ ನಟಿ.. ಆಧ್ರೆ ಅದ್ಯಾಕೋ ಪೂಜಾ ಹೆಗ್ಡೆ ನಸೀಬ್ ಸರಿ ಇಲ್ಲ ಎನ್ನುಸ್ತಿದೆ..
ಬುಟ್ಟಬೊಮ್ಮಗೆ ಅದೃಷ್ಟ ಕೈಕೊಟ್ಟಿದ್ಯಾ ಎನ್ನುವ ಮಾತುಗಳು ಆರಂಭವಾಗಿಬಿಟ್ಟಿದೆ… ಅಲಾ ವೈಕುಂಠಪುರಂ ಲೋ ಸಿನಿಮಾದ ಸಕ್ಸಸ್ ನ ನಂತರ ಬಹುತೇಕ ಪೂಜಾ ಹೆಗ್ಡೆಗೆ ಸಿಕ್ಕಿರೋದೆಲ್ಲಾ ಸೋಲೇ.. ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಗಳಿಸಿಲ್ಲ..
ದಳಪತಿ ವಿಜಯ್ ನಟನೆಯ ಬೀಸ್ಟ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡಿಲ್ಲ.. ಈಗ ರಾಮ್ ಚರಣ್ ಚಿರಂಜೀವಿ ನಟನೆಯ ಆಚಾರ್ಯ ಸಹ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ.. ಹೀಗೆ ಪೂಜಾ ಹೆಗ್ಡೆಗೆ ಹ್ಯಾಟ್ರಿಕ್ ಸೋಲಾಗಿರೋದು , ಅವರ ಅಭಿಮಾನಿಗಳನ್ನ ವಿಚಲಿತರನ್ನಾಗಿಸಿದೆ..ಮತ್ತೊಂದ್ ಪೂಜಾ ಹೆಗ್ಡೆ ಅವರದ್ದು ಐರನ್ ಲೆಗ್ ಎಂದೂ ಸಹ ಟ್ರೋಲ್ ಮಾಡಲಾಗ್ತಿದೆ..
ಈ ನಡುವೆಯೂ ಪೂಜಾ ಡಿಮ್ಯಾಂಡ್ ಕಡಿಮೆಯಾಗಿಲ್ಲ.. ಟಾಲಿವುಡ್ ನ ಸೆನ್ಷೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾದಲ್ಲಿ ಪೂಜಾ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.. ಈ ನಡುವೆ KGF 2 ಸಿನಿಮಾ ಮೂಲಕ ಇಡೀ ದೇಶಾದ್ಯಂತ ಕ್ರೇಜ್ ಹುಟ್ಟುಹಾಕಿರುವ ಯಶ್ ಸಿನಿಮಾದಲ್ಲಿ ಪೂಜಾ ನಾಯಕಿ ಎನ್ನಲಾಗ್ತಿದೆ.. ಈ ಮೂಲಕ ಕನ್ನಡದವರೇ ಆದ ಪೂಜಾ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದಂತಾಗುತ್ತೆ.. ಒಂದು ವೇಳೆ ಈ ಸುದ್ದಿ ನಿಜವೇ ಆದ್ರೆ..
‘ಕೆಜಿಎಫ್’ ಚಿತ್ರದ ನಂತರ ಹೀರೋ ಯಶ್ ಅವರ ಮುಂದಿನ ಚಿತ್ರಕ್ಕೆ ಸಿದ್ಧತೆಗಳು ನಡೆಯುತ್ತಿವೆ.
‘ಮಫ್ತಿ’ ಖ್ಯಾತಿಯ ನರ್ಥನ್-ಯಶ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಬರುತ್ತಿರುವುದು ಗೊತ್ತೇ ಇದೆ.
ಇತ್ತೀಚೆಗಷ್ಟೇ ಚಿತ್ರದ ಸ್ಕ್ರಿಪ್ಟ್ ಪೂರ್ಣಗೊಳಿಸಿರುವ ನರ್ಥನ್, ನಾಯಕ ಹಾಗೂ ಇತರೆ ನಟರ ಆಯ್ಕೆಯತ್ತ ಗಮನ ಹರಿಸಿದ್ದಾರೆ.
ಇದರ ಭಾಗವಾಗಿ ಚಿತ್ರತಂಡ ಪೂಜಾ ಹೆಗಡೆ ಅವರನ್ನು ನಾಯಕಿ ಪಾತ್ರಕ್ಕೆ ಸಂಪರ್ಕಿಸಿದೆ ಎಂದು ಸ್ಯಾಂಡಲ್ ವುಡ್ ಮೂಲಗಳು ತಿಳಿಸಿವೆ.
ತೆಲುಗು, ತಮಿಳು, ಹಿಂದಿಯಲ್ಲಿ ಸಿನಿಮಾ ಮಾಡುತ್ತಿರುವ ಪೂಜಾ ಕನ್ನಡದಲ್ಲಿ ಈವರೆಗೆ ಮಾಡಿಲ್ಲ.
ಹೀಗಾಗಿ ಯಶ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಗೆ ಪರಿಚಯವಾಗುತ್ತಾರಾ? ಅಥವಾ ಇಲ್ಲವೇ? ಎಂದು ಕಾದು ನೋಡಬೇಕಾಗಿದೆ.